ಭಾನುವಾರ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ: ನಾಳೆ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ

ಬೆಂಗಳೂರು:  ಹೃದಯಾಘಾತದಿಂದ ಶುಕ್ರವಾರ ಸಾವನ್ನಪ್ಪಿದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಇಂದು (ಶನಿವಾರ) ಸಂಜೆಯೇ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಅಂತ್ಯಕ್ರಿಯೆಯನ್ನ ಭಾನುವಾರ ನಡೆಸಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾಹಿತಿ ನೀಡಿ, ನಾಳೆ (ಭಾನುವಾರ) ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ.  ಪುನೀತ್ ರಾಜ್‌ ಕುಮಾರ್‌ ಅವರ ಪುತ್ರಿ ಇಂದು ಸಂಜೆ 5 ಗಂಟೆ ವೇಳೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇನ್ನು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ ಹಾಗಾಗಿ ನಾಳೆ ಅಂತ್ಯ ಕ್ರಿಯೆ ನಡೆಸಲಾಘುವುದೆಂದು ಅವರು ತಿಳಿಸಿದರು.

 ನಾಳೆವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಅಪ್ಪು ಅಭಿಮಾನಿಗಳು ಶಾಂತಿಯುತವಾಗಿ ಅಂತಿಮ ದರ್ಶನ ಪಡೆಯಬೇಕೆಂದು ಸಿಎಂ  ಮನವಿ ಮಾಡಿದರು.