ಪೇಜಾವರ ಶ್ರೀಗಳ ಬಗ್ಗೆ ಮಾತನಾಡಬೇಕಾದರೆ ಹಂಸಲೇಖ ಯೋಚಿಸಬೇಕಿತ್ತು -ಸಂಸದ ಪ್ರತಾಪ್ ಸಿಂಹ

ಮೈಸೂರು: ಪೇಜಾವರ ಶ್ರೀಗಳ ಬಗ್ಗೆ ಮಾತನಾಡಬೇಕಾದರೆ ಹಂಸಲೇಖ ಅವರು ಸ್ವಲ್ಪ ಯೋಚನೆ ಮಾಡಬೇಕಿತ್ತು. ಪರಿಜ್ಞಾನವನ್ನು ಇಟ್ಟುಕೊಳ್ಳಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಲ್ಲಿ ಸೋಮವಾರ ಪ್ರತಾಪ್ ಸಿಂಹ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಪೇಜಾವರ ಶ್ರೀಗಳು ಎಲ್ಲ ಜಾತಿ ಸ್ವಾಮಿಗಳ ತರ ಅಲ್ಲ ಎಂದು ಹೇಳಿದರು.

ಓರ್ವ ಸಾಧಕನ ಕುರಿತು ಮಾತನಾಡುವಾಗ ವಿವೇಚನೆ ಇಟ್ಟು ಮಾತನಾಡಿ ಎಂದು ಸಾಹಿತಿ ಹಂಸಲೇಖಗೆ ಪ್ರತಾಪ್ ಸಿಂಹ ಸಲಹೆ ನೀಡಿದರು.

ಹಂಸಲೇಖ ಅವರು ಕರ್ನಾಟಕದಲ್ಲಿ ಚಲನಚಿತ್ರ ಸಾಹಿತ್ಯ ರಚನೆ, ಸಂಗೀತ ಈ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆ ಮಾಡಿ ನಮ್ಮೆಲ್ಲರ ಹೃದಯದಲ್ಲಿ ಸ್ಥಾನ ಪಡೆದಿರುವಂತಹ ಒಳ್ಳೆಯ ವ್ಯಕ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಉಳಿದ ಸಾಧಕರ ಬಗ್ಗೆ ಅಸಂಬದ್ಧದ ಮಾತುಗಳನ್ನಾಡಿ ಜನಾಭಿಪ್ರಾಯ ವಿರುದ್ಧವಾದಾಗ ನಾಮಕಾವಸ್ತೆಗೆ ಕ್ಷಮೆಯನ್ನು ಕೇಳುವುದು ಚಾಳಿಯಾಗಿಬಿಟ್ಟಿದೆ. ಈ ಚಾಳಿಗೆ ಹಂಸಲೇಖ ಬಲಿಯಾಗಿದ್ದು ನಿಜಕ್ಕೂ ಕೂಡ ವೈಯುಕ್ತಿಕವಾಗಿ ಬೇಸರವಾಗಿದೆ ಎಂದರು.

ಇಂದು ಭೇದ ಭಾವ, ತಾರತಮ್ಯ, ಅಸಮಾನತೆ ಎನ್ನುವುದು ಜನರ ಮನಸ್ಸಿನಲ್ಲಿದೆ. ಅದನ್ನು ತೊಡೆದು ಹಾಕಲು ಸಮಭಾವವನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಪಟ್ಟರು ಹಾಗೂ ಆ ಮೂಲಕ ಎಲ್ಲರಿಗೂ ಒಂದು ಮೇಲ್ಪಂಕ್ತಿ ಹಾಕಿಕೊಟ್ಟಂತಹ ಯತಿಗಳು ಅಂದರೆ ಪೇಜಾವರ ಶ್ರೀಗಳು ಎಂದು ಪ್ರತಾಪ್ ಸಿಂಹ ಹೇಳಿದರು.

ಆದರೆ ನನಗೆ ಹಂಸಲೇಖ ಅವರು ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಕೋಳಿಮಾಂಸ ಕೊಟ್ಟರೆ ತಿಂತಾರಾ? ಕುರಿ ರಕ್ತದ್ದು ಪ್ರೆöÊ ಕೊಟ್ಟರೆ ತಿಂತಾರಾ? ಲಿವರ್ ಪ್ರೆöÊ ಕೊಟ್ಟರೆ ತಿಂತಾರಾ, ಈ ಮಾತು ಯಾಕೆ ಬಂತು ಅರ್ಥವಾಗುತ್ತಿಲ್ಲ. ಹಂಸಲೇಖ ಅವರೇ ಅದು ಯಾವುದೇ ಜಾತಿ ಜನಾಂಗದ ಸ್ವಾಮೀಜಿಗಳಿರಬಹುದು. ಅವರೆಲ್ಲರಾಹಾರ ಪದ್ಧತಿ ಸಾಧು ಸಂತರದ್ದು ಸಸ್ಯಾಹಾರವಾಗಿರುತ್ತದೆ. ಪೇಜಾವರ ಶ್ರೀಗಳು ಹೋಗಿದ್ದು ಮನಸ್ಸಿನಲ್ಲಿರುವ ತಾರತಮ್ಯ ತೊಡೆದುಹಾಕಲಿಕ್ಕೇ ಹೊರತು ಆಹಾರ ಪದ್ಧತಿ ವಿಚಾರಕ್ಕಲ್ಲ ಎಂದರು.

ನಿಮಗೆ ಕರ್ನಾಟಕದಲ್ಲಿ ಅಭಿಮಾನಿಗಳಿದ್ದಾರೆ. ಪೇಜಾವರ ಶ್ರೀಗಳಿಗೆ ರಾಷ್ಟಾçದ್ಯಂತ ಕೂಡ ಪೇಜಾವರ ಶ್ರೀಗಳಿಗೆ ಅಭಿಮಾನಿಗಳಿದ್ದಾರೆ. ಇನ್ನೊಬ್ಬ ಸಾಧಕನ ಬಗ್ಗೆ ಮಾತನಾಡುವಾಗ ವಿವೇಚನೆ ಇಟ್ಟು ಮಾತನಾಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.