ಮೈಸೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡ ಡಿಸೆಂಬರ್ 10ರಿಂದ 19ರವರೆಗೆ ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದರು.
ಈ ಕುರಿತು ರಂಗಾಯಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕೋತ್ಸವದಲ್ಲಿ ವಿವಿಧ ರಾಜ್ಯಗಳ, ವಿವಿಧ ಭಾಷೆಗಳ ಶ್ರೇಷ್ಠ ನಾಟಕಗಳು ಪ್ರದರ್ಶನಗೊಳ್ಳುವುದರೊಂದಿಗೆ ಜಾನಪದ ಕಲಾ ಪ್ರದರ್ಶನ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನುಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಭೂಮಿಗೀತ, ಕಲಾಮಂದಿರ, ವನರಂಗ, ಬಿ.ವಿ.ಕಾರಂತ ರಂಗಚಾವಡಿ ಹಾಗೂ ಸಂಪತ್ ರಂಗ ಮಂದಿರ, ಕಿಂದರಜೋಗಿ ಜನಪದರಂಗದಲ್ಲಿ ಈ ಕಾರ್ಯ ಕ್ರಮಗಳು ನಡೆಯಲಿವೆ ಎಂದು ಹೇಳಿದರು.
ನಾಟಕೋತ್ಸವವನ್ನು ತಾಯಿ ಶೀರ್ಷಿಕೆಯಡಿಯಲ್ಲಿ ನಡೆಸುತ್ತಿದ್ದು ತಾಯಿ ವಿಷಯ ಶೀರ್ಷಿಕೆಯನ್ನು ವಿಶಾಲ ಅರ್ಥದಲ್ಲಿ ನೆಲ, ಜಲ, ಪ್ರಕೃತಿ, ಭಾಷೆ, ರಾಜ್ಯ ರಾಷ್ಟ್ರಗಳ ಬಗ್ಗೆ ಅಭಿಮಾನ, ಗೌರವ, ಪ್ರೀತಿ ಮೂಡಿಸುವ ವಿಚಾರದಲ್ಲಿ ಚಿಂತನ ಮಂಥನಗಳನ್ನು ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.
ಜಮೀನು-ಜಲ-ಜಂಗಲ್-ಜಾನುವಾರು-ಜನ ಈ ಪಂಚಸೂತ್ರದಲ್ಲಿ ತಾಯಿ ಮತ್ತು ತಾಯ್ತನವನ್ನು ನೋಡುವ ಪ್ರಯತ್ನ ಮಾಡುತ್ತಿದ್ದೇವೆ. ತಾಯಿ ಬಗ್ಗೆ ವಿಸ್ತೃತವಾದ ಚರ್ಚೆಯನ್ನು ಒಳಗೊಂಡ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ನಾಟಕೋತ್ಸವದ ಸಂದರ್ಭದಲ್ಲಿ ಏರ್ಪಡಿಸಲಾಗಿದೆ ಎಂದರು.
ನಾಟಕಗಳ ವಿವರ
ರಾಷ್ಟ್ರದ ವಿವಿಧ ರಾಜ್ಯಗಳ ಬುಡ್ಡೇನೇ ಕಹ (ಹಿಂದಿ), ಸಹೀದ್ ಉದಮ್ ಸಿಂಗ್ ಆಜಾದ್, (ಪಂಜಾಬಿ),ಕಾಜುಮರನ್ (ತಮಿಳು), ಓಲ್ಡ್ ಮ್ಯಾನ್ &ಸೀ (ಮಲಯಾಳಂ), ರುಢಾಲಿ(ರಾಜಸ್ಥಾನಿ), ಲಹೇರೋಂಕ ರಾಜಹಂಸ(ಹಿಂದಿ), ಸೂರ್ಜ್ಯಾಸ್ತ್ರು ಸೂರ್ಜೋದಯ್(ಒರಿಯಾ), ಅಶಾಂತಿ ಪರ್ವ(ಮರಾಠಿ), ಮನಲೋ ಮನಯಾಟ(ತೆಲುಗು), ಆಟಿ ತಿಂಗಳ್ದ ಒಂಜಿ ದಿನ (ತುಳು) ನಾಟಕಗಳು ಪ್ರದರ್ಶನಗೊಳ್ಳಲಿವೆ.
ಕನ್ನಡ ಮತ್ತು ಇತರೆ ಭಾಷೆಯ ವೆಲ್ಕಂ ಜಾನಕಿ ಕಂ ಜಿಂಗಾನಿಯಾ (ಕನ್ನಡ), ಪ್ರಾಜೆಕ್ಟ್(ಕನ್ನಡ), ನೀನೇ ಬಸಲಿಂಗಿ(ಕನ್ನಡ), ಕಾಮರೂಪಿಗಲ್(ಕನ್ನಡ), ಮತ್ತೆ ಮುಖ್ಯಮಂತ್ರಿ(ಕನ್ನಡ), ಜಾಳಪೆÇೀಳ(ಕನ್ನಡ), ಉಚ್ಛಿಷ್ಠ(ಕನ್ನಡ), ಏಸೂರ ಕೊಟ್ಟರು, ಈಸೂರ ಬಿಡೆವು(ಕನ್ನಡ), ಹಕ್ಕಿಕತೆ (ಕನ್ನಡ), ಶಕ್ತಿ 1.0(ಕನ್ನಡ), ಈಡಿಪಸ್ (ಕನ್ನಡ), ಲಾಕ್ ಡೌನ್(ಕನ್ನಡ), ಶ್ರೀಕೃಷ್ಣ ರಾಯಭಾರ (ಕನ್ನಡ), ಚಾಮುಂಡರಾಯ(ಕನ್ನಡ), ಸಾಮ್ರಾಟ್ ಅಶೋಕ್(ಕನ್ನಡ), ಸಂಕ್ರಾಂತಿ(ಕನ್ನಡ), ಏಕ್ಲೋ ಅನೇಕ್ಲೋ ಕರ್ಮದಿನ್(ಕೊಂಕಣಿ), ದಿ ಸ್ಕ್ವೈರ್ ರೂಟ್ ಆಪ್ ಎ ಸಾನೆಟ್ (ಇಂಗ್ಲಿಷ್) ನಾಟಕ ಪ್ರದರ್ಶನಗೊಳ್ಳಲಿದೆ.
ಇತರೆ ರಂಗಪ್ರಕಾರದ ನಾಟಕಗಳಾದ ರಾಮ ರಾವಣ ಯುದ್ಧ(ಕನ್ನಡ) ಬಯಲಾಟ, ಚಕ್ರವ್ಯೂಹ (ಕನ್ನಡ) ಯಕ್ಷಗಾನ, ವೀರ ವಿರಾಗಿ ಬಾಹುಬಲಿ(ಕನ್ನಡ) ದೊಡ್ಡಾಟ, ಗೊಂಬೆಯಾಟ ಪ್ರದರ್ಶನಗೊಳ್ಳಲಿದೆ.
ಮೈಸೂರು ರಂಗಾಯಣದ ನಾಟಕಗಳಾದ ಪರ್ವ(ಕನ್ನಡ), ಮೂಕನ ಮಕ್ಕಳು(ಕನ್ನಡ), ಸೂತ್ರಧಾರ(ಕನ್ನಡ), ಚಂದ್ರಗಿರಿಯ ತೀರದಲ್ಲಿ(ಕನ್ನಡ), ಚಿತ್ರಪಟ (ಕನ್ನಡ) ನಾಟಕಗಳು ಪ್ರದರ್ಶನಗೊಳ್ಳಲಿದೆ.

