ಮೈಸೂರು: ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಒಂದೇ ಸಮನೆ ಮಳೆ ಬೀಳುತ್ತಿದ್ದು, ಚಾಮುಂಡಿಬೆಟ್ಟದ ನಂದಿ ವಿಗ್ರಹಕ್ಕೆ ಹೋಗುವ ರಸ್ತೆ ಮತ್ತಷ್ಟು ಕುಸಿದಿದ್ದು, ಆತಂಕ ಸೃಷ್ಠಿಯಾಗಿದೆ.
ಭೂ ಕುಸಿತವಾಗಿದ್ದ ಸ್ಥಳದಲ್ಲೇ ಮತೆ ಬಿರುಕು ಬಿಟ್ಟಿದೆ. ಮಳೆ ಮುಂದುವರಿದರೆ ರಸ್ತೆ ಕುಸಿಯುವ ಆತಂಕ ಎದುರಾಗಿದೆ. ನಿನ್ನೆ ಸಂಜೆ ಮಳೆ ಸುರಿದಿದೆ ಗುರುವಾರ ಕೂಡಾ ಮುಂದುವರಿದಿದೆ, ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ರಸ್ತೆ ಕುಸಿತವಾಗಿದೆ.
ಇತ್ತೀಚಿಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಿ ರಸ್ತೆ ಕಾಮಗಾರಿಗೆ ಚಿಂತನೆ ನಡೆಸಿದ್ದರು. ಆದರೆ ಭೂಮಿ ಕುಸಿದಿರುವ ಜಾಗದ ಅನತಿ ದೂರದಲ್ಲೇ ಬಿರುಕು ಕಾಣಿಸಿಕೊಂಡಿದ್ದು ಕಾಮಗಾರಿ ಮತ್ತಷ್ಟು ವಿಳಂಬ ಆಗಬಹುದು ಎಂದು ತಿಳಿದು ಬಂದಿದೆ.

