ಮೈಸೂರು ಮಂಡಿ ಮೊಹಲ್ಲಾದಲ್ಲಿ ಮನೆ ಕುಸಿತ: ಐವರ ರಕ್ಷಣೆ

ಮೈಸೂರು: ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಮಂಡಿ ಪೊಲೀಸ್ ಠಾಣೆ ಎದುರಿರುವ ಮರಾಠ ರಾಮಮಂದಿರ ಬಳಿ ಮನೆಯೊಂದು ಕುಸಿತವಾಗಿದೆ.

ನಿತ್ಯ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮನೆ ಕುಸಿತಗೊಂಡಿದೆ.

ವಿಷ ತಿಳಿದು ಸ್ಥಳಕ್ಕಾಗಮಿಸಿದ ಪಾಲಿಕೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿ ಅವಸೇಷಗಳಡಿ ಸಿಲುಕಿದ್ದ ಒಂದೇ ಕುಟುಂಬದ 5 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.