ಕನಕದಾಸರ ಜಯಂತಿ : ಮೂವರು ಮಹನೀಯರಿಗೆ ಅಭಿನಂದನೆ

ಮೈಸೂರು: ಮೈಸೂರಿನಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಲಯದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಕನಕದಾಸರ ಜಯಂತಿ ಯನ್ನು ಮೂವರು ಮಹನೀಯರನ್ನು ಸನ್ಮಾನಿಸುವ ಮೂಲಕ ಆಚರಣೆ ಮಾಡಲಾಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಧರ್ಮ ಪತ್ರಿಕೆಯ ಸಂಪಾದಕರಾದ ಕೆ.ಎಸ್.ವಿಜಯಲಕ್ಷ್ಮಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಪುರಸ್ಕಾರ ಪಡೆದ ಶಿಲ್ಪಕಾರರಾದ ಯೋಗರಾಜ್, ಗೋವಾದಲ್ಲಿ ನಡೆದ ರಾಷ್ಟ್ರೀಯ ಯೋಗದಿನದಲ್ಲಿ ಚಿನ್ನದ ಪದಕ ಹಾಗೂ ನೇಪಾಳದಲ್ಲಿ ಅಂತರಾಷ್ಟ್ರೀಯ ಯೋಗದಲ್ಲಿ ಚಿನ್ನದ ಪದಕ ಪಡೆದಿರುವ ಹರಿ ಅವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿಮಂಜು ಕನಕದಾಸರು ದಾಸ ಸಾಹಿತ್ಯ ದಲ್ಲಿ ವಿಶ್ವದ ಗಮನ ಸೆಳೆದವರು, ಜಾತಿ ಜಾತಿಯ ತಾರತಮ್ಯವನ್ನು ತಮ್ಮ ದಾಸರ ಪದಗಳಲ್ಲಿ ಹೋಗಲಾಡಿಸಿದ ಮಹಾನ್ ಪುರುಷರು ಎಂದು ಹೇಳಿದರು.

ಇಂತಹ ಮಹಾನ್ ಸಾಧಕನ ಪ್ರತಿಮೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಇಲ್ಲ,ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ನವರು ಕನಕ ಜಯಂತಿಯನ್ನು ಸರ್ಕಾರದಿಂದ ಮಾಡುವ ಮೂಲಕ ರಜೆ ಘೋಷಿಸಿದರು, ಕನಕದಾಸರ ಹೆಸರಿನಲ್ಲಿ ಪ್ರಾಧಿಕಾರ ಮಾಡಿ ಸುಮಾರು 1200ಕೋಟಿ ರೂ ಮೀಸಲಿಟ್ಟರು ಹಾಗೇಯೆ ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಇವರ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ತೆರೆಯಲು ಹಾಗೂ ಕಾಗಿನೆಲೆಯ ಅಭಿವೃದ್ಧಿ ಯ ಬಗ್ಗೆ ಹೆಚ್ಚು ಕಾಳಜಿ ತೋರುತಿರುವುದು ಸಂತೋಷ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ದಲ್ಲಿ ನಗರ ಭಾ.ಜ.ಪ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ,ಗ್ರಾಮಾಂತರ ಅಧ್ಯಕ್ಷರಾದ ಮಂಗಳ ಸೋಮಶೇಖರ್, ಮಹಾ ಪೌರರಾದ ಸುನಂದ ಪಾಲನೇತ್ರ,ಮಾಜಿ ಸಚಿವರಾದ ವಿಜಯಶಂಕರ್,ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮೈವಿ.ರವಿಶಂಕರ್ ನಿಗಮ ಮಂಡಳಿ ಅಧ್ಯಕ್ಷರಾದ ರಾಜೀವ್,ಚಿಕ್ಕಮ ಬಸವರಾಜ್, ಕೌಟಿಲ್ಯ ರಘು,ಹೇಮಂತ್ ಗೌಡ,ಸುರೇಶ್ ಬಾಬು,ಅನಿಲ್ ಥಾಮಸ್, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ಬಿ.ಎಂ.ರಘು,ನರಸಿಂಹ ರಾಜ ಕ್ಷೇತ್ರದ ಅಧ್ಯಕ್ಷರಾದ ಭಾನು ಪ್ರಕಾಶ, ನಗರಪಾಲಿಕೆ ಸದಸ್ಯರಾದ ಕೆ.ಜೆ.ರಮೇಶ್,ಜಗದೀಶ್ ನಗರ ಪಾಲಿಕೆ ಮಾಜಿ ಸದಸ್ಯರಾದ ಶಿವಕುಮಾರ್, ಗೋಪಾಲ್, ಮಣಿರತ್ನಂ, ಸೂರಜ್, ಕೃಷ್ಣ,ಜೀವನ್, ಕೇಬಲ್ ಮಹೇಶ್,ಜಯರಾಮ್,ರವಿತೇಜ,ಸೂರಜ್ ಮತ್ತಿತರರು ಪಾಲ್ಗೊಂಡಿದ್ದರು.