ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ಉಪವಿಭಾಗದಲ್ಲಿ ಎಲ್ಲೆಲ್ಲೂ ಮಹಿಳಾ ಪೆÇಲೀಸ್ ಸಿಬ್ಬಂದಿಗಳದೇ ಕಾರುಬಾರು.
ಹೌದು ಬುಧವಾರ ರಾತ್ರಿ ಎಲ್ಲಿ ನೋಡಿದರಲ್ಲಿ ಮಹಿಳಾ ಪೆÇಲೀಸರೇ ಕಾಣುತ್ತಿದ್ದರು.
ಠಾಣೆ, ರಸ್ತೆ, ಗಲ್ಲಿಗಳು ಹೀಗೆ, ಪ್ರತಿಯೊಂದೂ ಸ್ಥಳದಲ್ಲಿಯೂ ಮಹಿಳಾ ಪೆÇಲೀಸರನ್ನೇ ಕರ್ತವ್ಯಕ್ಕೆ ನಿಯೋಜಿಸಿದ್ದುದು ವಿಶೇಷವಾಗಿತ್ತು.
ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ನಂಜನಗೂಡು ಉಪವಿಭಾಗ ಕಚೇರಿಯಲ್ಲಿ ಬುಧವಾರ ನಡೆದ ಮಹಿಳಾ ದಿನದಲ್ಲಿ ಮಹಿಳಾ ಪೆÇಲೀಸ್ ಸಿಬ್ಬಂದಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡರು.
ಎಲ್ಲ ವಿಭಾಗಗಳಲ್ಲಿಯೂ ಮಹಿಳೆಯರು ಕಾರ್ಯನಿರ್ವಹಿಸಿ ಪುರುಷ ಸಿಬ್ಬಂದಿಗಳಿಲ್ಲದಿದ್ದರೂ ಸಮರ್ಥವಾಗಿ ಕಾರ್ಯನಿರ್ವಹಿಸುವ ಚಾಕಚಕ್ಯತೆಯನ್ನು ತೋರಿಸಿದರು.
ರಾತ್ರಿ ಪಾಳಿಯಲ್ಲೂ ಪುರುಷ ಸಿಬ್ಬಂದಿಗಳನ್ನು ಹೊರಗಿಟ್ಟು ಕೇವಲ ಮಹಿಳಾ ಸಿಬ್ಬಂದಿಗಳನ್ನೇ ನಿಯೋಜಿಸಲಾಗಿತ್ತು.
ಎಲ್ಲೆಡೆಯೂ ಮಹಿಳಾ ಸಿಬ್ಬಂದಿಗಳು, ಪುರುಷ ಸಿಬ್ಬಂದಿಗಳಷ್ಟೇ ಸಮರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ತಮ್ಮ ಸಾಮರ್ಥವೇನೆಂಬುದನ್ನು ತೋರಿಸಿಕೊಟ್ಟರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಪ್ರತಿಕ್ರಿಯಿಸಿ ಇದೊಂದು ವಿನೂತನ ಪ್ರಯೋಗ. ಬುಧವಾರ ರಾತ್ರಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
ಮಹಿಳಾ ಪೆÇಲೀಸ್ ಸಿಬ್ಬಂದಿಗಳನ್ನಷ್ಟೇ ನಂಜನಗೂಡು ಉಪವಿಭಾಗದ ಟಿ.ನರಸೀಪುರ, ನಂಜನಗೂಡು, ಬನ್ನೂರು, ಹುಲ್ಲಹಳ್ಳಿ ಭಾಗಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದರು.
ಸಿಬ್ಬಂದಿ ಕಡಿಮೆ ಇರುವ ಕಡೆ ಮಹಿಳಾ ಗೃಹ ರಕ್ಷಕರನ್ನು ನಿಯೋಜಿಸಲಾಗಿತ್ತು ಎಂದು ತಿಳಿಸಿದರು.

