ಎಇ ಶ್ರೀನಿವಾಸ್ ಲಾಕರ್ ನಲ್ಲಿ ಒಂದೂವರೆ ಕೆಜಿ ಚಿನ್ನ ಪತ್ತೆ

ಮೈಸೂರು:  ಎಸಿಬಿ ಅಧಿಕಾರಿಗಳು ಬುಧವಾರ  ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದರ ಪೈಕಿ ಕೆ.ಆರ್ ಪೇಟೆಯಲ್ಲಿ ಇಂಜಿನಿಯರ್ ಆಗಿರುವ ಕೆ. ಶ್ರೀನಿವಾಸ್ ಕೂಡಾ ಕುಬೇರರಲ್ಲಿ ಒಬ್ಬರು.

ಮೈಸೂರಿನ ಸರಸ್ವತಿಪುರಂನ ಕೆನರಾ ಬ್ಯಾಂಕ್ ನಲ್ಲಿರುವ ಎಇ ಶ್ರೀನಿವಾಸ್ ಲಾಕರ್ ನಲ್ಲಿ   42,10,000 ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ಅಲ್ಲದೆ 1,900 ರೂ. ಮೌಲ್ಯದ 60 ಗ್ರಾಂ ಬೆಳ್ಳಿ ಕೂಡ ಪತ್ತೆಯಾಗಿದೆ.

ಬಿಡಿಎ ಕಚೇರಿಗಳಲ್ಲಿ ಎಸಿಬಿ ದಾಳಿ ಮುಂದುವರೆದಿದ್ದು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಶ್ರೀನಿವಾಸ್ ಬಳಿ ಬರೋಬ್ಬರಿ 3 ಕೆಜಿ ಚಿನ್ನ ಪತ್ತೆಯಾಗಿದ್ದು,ಅವರ ಮನೆಯಲ್ಲಿ ಬುಧವಾರ ಒಂದೂವರೆ ಕೆಜಿ ಚಿನ್ನ ಸಿಕ್ಕಿತ್ತು.

ಲಾಕರ್ ಗಳಲ್ಲಿ  ಒಂದೂವರೆ ಕೆಜಿಗೂ ಹೆಚ್ಚು ಚಿನ್ನ ಪತ್ತೆಯಾಗಿದೆ.

ಬ್ಯಾಂಕ್ ನಲ್ಲಿ ಮತ್ತಷ್ಟು ಲಾಕರ್ ಹೊಂದಿರುವ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಎಲ್ಲ ಲಾಕರ್ ಬಗ್ಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈವರೆಗೆ ಒಟ್ಟು 3 ಕೆಜಿಯಷ್ಟು ಚಿನ್ನ ಪತ್ತೆಯಾಗಿದೆ, ಬೆಳ್ಳಿ ವಸ್ತುಗಳನ್ನು ಇನ್ನೂ ತೂಕ ಮಾಡಿಲ್ಲ ಎನ್ನಲಾಗಿದೆ. ಈಗಾಗಲೇ ಎರಡು ಲಾಕರ್ ತೆಗೆಸಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.