ಎನ್ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಮ್ಮ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ.

ರಾಜಪುರ ಪ್ರದೇಶದಲ್ಲಿ  ಭದ್ರತಾ ಪಡೆಗಳು ಎನ್‍ಕೌಂಟರ್ ನಡೆಸಿದ್ದು, ಹತರಾದ ಭಯೋತ್ಪಾದಕರಲ್ಲಿ ಒಬ್ಬ ಜೈಶ್-ಎ-ಮೊಹಮ್ಮದ್ ಕಮಾಂಡರ್, ಮತ್ತೊಬ್ಬ ವಿದೇಶಿ ಭಯೋತ್ಪಾದಕ ಎಂದು ತಿಳಿದು ಬಂದಿದೆ.

ಎನ್ಎನ್‍ಕೌಂಟರ್ ನಲ್ಲಿ ಜೈಶ್-ಎ-ಮೊಹಮ್ಮದ್ ನ ಟಾಪ್ ಕಮಾಂಡರ್ ಯಾಸಿರ್ ಪ್ಯಾರೆಯನ್ನು ಹತ್ಯೆ ಮಾಡಲಾಗಿದೆ.

ಇದರೊಂದಿಗೆ ವಿದೇಶಿ ಭಯೋತ್ಪಾದಕ ಫುರ್ಕನ್ ಕೂಡ ಎನ್ ಕೌಂಟರ್‍ನಲ್ಲಿ ಹತನಾಗಿದ್ದು ಇಬ್ಬರೂ ಹಲವು ಗಂಭೀರ ಭಯೋತ್ಪಾದಕ ಘಟನೆಗಳನ್ನು ನಡೆಸಿದ್ದರು ಕಾಶ್ಮೀರದ ಐಜಿ ತಿಳಿಸಿದ್ದಾರೆ.

ಭದ್ರತಾ ಪಡೆಗಳು ಮಂಗಳವಾರ ರಾತ್ರಿ, ಪುಲ್ವಾಮಾದ ರಾಜಪುರದ ಕಸ್ಬಯಾರ್ ಗ್ರಾಮವನ್ನು ಸುತ್ತುವರಿದು ಬೆಳಿಗ್ಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ, ಮನೆಯೊಂದರಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಬಳಿಕ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.

ಮತ್ತೊಬ್ಬ ಭಯೋತ್ಪಾದಕ ತಲೆಮರೆಸಿಕೊಂಡಿರಬಹುದೆಂದು ಹೇಳಲಾಗುತ್ತಿದ್ದು, ಶೋಧ ಕಾರ್ಯಾಚರಣೆ  ನಡೆಯುತ್ತಿದೆ.