ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 2021 ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎರಡನೆ ಹಂತದ ಚುನಾವಣೆ ಭಾನುವಾರ ನಡೆಯಿತು.
ಕೃಷ್ಣಮೂರ್ತಿಪುರಂನ ಭಗಿನೀ ಸೇವಾ ಸಮಾಜದಲ್ಲಿ ಮೊದಲನೇ ಹಂತದ ಚುನಾವಣೆಗೆ ಮತದಾನ ನಡೆದಿತ್ತು.
ಮೈಸೂರು ಹಾಗೂ ಸುತ್ತಮುತ್ತ ಜಿಲ್ಲೆಯಲ್ಲಿ 4300 ಮತದಾರರಿದ್ದು 1221ಮತದಾನ ನಡೆದಿದೆ.
ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಆರ್. ಲಕ್ಷ್ಮೀಕಾಂತ್ ,ಅಶೋಕ್ ಹಾರ್ನಳ್ಳಿ ಹಾಗೂ ರಘುನಾಥ್ ಸ್ಪರ್ಧಿಸಿದ್ದಾರೆ.
ಹಿರಿಯ ಸಾಹಿತಿಎಸ್. ಎಲ್. ಬೈರಪ್ಪ ,ಶಾಸಕ ಎಸ್. ಎ. ರಾಮದಾಸ್ ,ಮೂಡ ಅಧ್ಯಕ್ಷ ಎಚ್. ವಿ. ರಾಜೀವ್ ,ಮೂಡಾ ಮಾಜಿ ಅಧ್ಯಕ್ಷ ಕೆ. ಆರ್. ಮೋಹನ್ ಕುಮಾರ್ ,ಟಿ. ಎಸ್. ಶ್ರೀವತ್ಸ ,ಮೈಲಾಕ್ ಅಧ್ಯಕ್ಷ ಎನ್. ವಿ. ಫಣೀಶ್ ,ನಗರಪಾಲಿಕೆ ಸದಸ್ಯ ಮಾ. ವಿ. ರಾಮ್ ಪ್ರಸಾದ್ ,ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಮುಂತಾದವರು ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪ್ರಮುಖರು.

