ಬೆಳಗಾವಿ: ಜೆಡಿಎಸ್ ಮುಳುಗುತ್ತಿರುವ ಹಡಗು, ಅದನ್ನು ತೊರೆದಿರುವ ಅಶೋಕ್ ಪೂಜಾರಿಯವರಿಗೂ ಒಳ್ಳೆಯದಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿ ಭಾಗದ ಜೆಡಿಎಸ್ ನಾಯಕ ಅಶೋಕ್ ಪೂಜಾರಿ ಅವರು ಜೆಡಿಎಸ್ ಅನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವತ್ತಿದ್ದರೂ ಜನಶಕ್ತಿಗೇ ಮೇಲುಗೈ, ರಾಜಕೀಯ ಶಕ್ತಿ ಯಾವತ್ತಿಗೂ ಮೇಲುಗೈ ಆಗಲು ಸಾಧ್ಯವಿಲ್ಲ, ಜನರು ಇಂದು ಕಾಂಗ್ರೆಸ್ ನಂಬಿದ್ದಾರೆ, ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಛೇಡಿಸಿದರು. ಜೆಡಿಎಸ್ ತೊರೆದಿರುವ ಅಶೋಕ್ ಪೂಜಾರಿ ಅವರಿಗೆ ಮುಂದಿನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಾಗಲಿದೆ, ನಮ್ಮ ಕಾಂಗ್ರೆಸ್ ಪಕ್ಷಕ್ಕೂ ಮತ್ತೊಂದು ಬಲ ಬಂದಿದೆ ಎಂದು ಹೇಳಿದರು.

