ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಕ್ಕೆ ಕೆಟ್ಟ ಸಂದೇಶಗಳನ್ನು ಕೊಡುತ್ತಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಚಿತ್ರದುರ್ಗದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ನವರು ನಾವು ಟಿಪ್ಪು ಜಯಂತಿ ಮಾಡುತ್ತೇವೆ, ಗೋ ಹತ್ಯೆ ಕಾನೂನನ್ನು ಮತ್ತೊಮೆ ್ಮಜಾರಿಗೆ ತರುತ್ತೇವೆ. ಮತಾಂತರ ಕಾನೂನನ್ನ ವಾಪಾಸ್ ತರುತ್ತೇವೆ ಎನ್ನುವ ಮೂಲಕ ರಾಜ್ಯದ ಜನರಿಗೆ ಸಿದ್ದರಾಮಯ್ಯ ಕೆಟ್ಟ ಸಂದೇಶವನ್ನ ಕೊಡುತ್ತಿದ್ದಾರೆಂದರು.
ರಾಜ್ಯದ ಜನತೆ ಇದನ್ನು ಗಮನಿಸುತ್ತಿದ್ದಾರೆ. ನಾವು ಇದನ್ನ ದೊಡ್ಡ ಪ್ರಮಾಣದಲ್ಲಿ ಎದುರಿಸುತ್ತೇವೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಇವರು ಏನೇ ಹೇಳಿಕೊಂಡರು ನಮ್ಮ ನಿಲುವನ್ನು ವಾಪಾಸ್ ಪಡೆಯುವುದಿಲ್ಲ. ನಾವು ಇದನ್ನ ಗಟ್ಟಿಯಾಗಿ ಅನುಸರಣೆ ಮಾಡುತ್ತೇವೆ ಹಾಗೂ ಆಚರಣೆಗೆ ತರುತ್ತೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿ ಎಂ ಬದಲಾವಣೆ ವಿಚಾರ ನೂರಕ್ಕೆ ನೂರರಷ್ಟು ಇದು ಊಹಾಪೆÇೀಹ ಅಮಿತ್ ಶಾ ಅವರೇ ದಾವಣಗೆರೆಗೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ಅರುಣ್ ಸಿಂಗ್ ಕೂಡ ತಿಳಿಸಿದ್ದಾರೆ. ನಾವೆಲ್ಲ ಸಚಿವ ಸಂಪುಟದಲ್ಲಿ ಮಾತನಾಡಿ, ಮುಂದಿನ ಚುನಾವಣೆಯನ್ನು ಬೊಮ್ಮಾಯಿ ಅವರ ನೇತೃತ್ವದಲ್ಲಿ ಎದುರಿಸಿ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನ ರಚನೆ ಮಾಡುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು.

