ದೆಹಲಿಯಲ್ಲಿ ಶೇ. 48ರಷ್ಟು ಓಮಿಕ್ರಾನ್ !

ನವದೆಹಲಿ: ದೆಹಲಿಯಲ್ಲಿ ಇದುವರೆಗೆ ಪರೀಕ್ಷಿಸಲಾದ 115 ಕೊವಿಡ್ ‌ಮಾದರಿಗಳಲ್ಲಿ 48ರಷ್ಟು ಓಮಿಕ್ರಾನ್ ರೂಪಾಂತರ ಪತ್ತೆಯಾಗಿದೆ ಎಂದು ದೆಹಲಿ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಯಾವುದೇ ಪ್ರಯಾಣ ಇತಿಹಾಸ ಹೊಂದಿರದ ಜನರಲ್ಲೂ ಓಮಿಕ್ರಾನ್ ಸೋಂಕು ತಗಲಿರುವುದು ಕಂಡುಬಂದಿದೆ. ಇದು ನಿಧಾನವಾಗಿ ಸಮುದಾಯದಲ್ಲಿ ಹರಡುತ್ತಿದೆ ಎಂಬುದನ್ನು ತಿಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ದೆಹಲಿ ಆಸ್ಪತ್ರೆಗಳಲ್ಲಿ 200 ಕೋವಿಡ್ ಸೋಂಕಿತರು ಇದ್ದಾರೆ. ಈ ಪೈಕಿ 102 ಮಂದಿ ನಗರಕ್ಕೆ ಸೇರಿದವರು, 98 ಜನರು ಹೊರಗಿನವರು ಎಂದು ಸಚಿವರು ನುಡಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಿಕರೂ ಸೇರಿದಂತೆ ದೆಹಲಿಯ ಆಸ್ಪತ್ರೆಗಳಲ್ಲಿರುವ 200 ಕೋವಿಡ್‍ರೋಗಿಗಳ ಪೈಕಿ 115 ಮಂದಿ ಲಕ್ಷಣ ರಹಿತರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಆಸ್ಪತ್ರೆಗಳಲ್ಲಿರಿಸಲಾಗಿದೆ ಎಂದು ಜೈನ್ ವಿವರಿಸಿದ್ದಾರೆ.