ನವದೆಹಲಿ: ವಿಶ್ವಾದ್ಯಂತ ಹೆಚ್ಚುತ್ತಿರುವ ಕೊರೋನಾ ಎಲ್ಲರನ್ನೂ ಅವರವರ ಮನೆಗಳಲ್ಲಿಯೇ ಬಂಧಿಯಾಗಿಸಿದೆ.
ಮದುವೆಗಳ ಮೇಲೂ ಕೊರೋನಾ ಪ್ರಭಾವ ಅಷ್ಟಸ್ಟಲ್ಲ..
ಈ ಕಾರಣಕ್ಕೆ ಮನೆಮಂದಿ ಸೇರಿ 100 ಜನರೆಗೆ ಮಾತ್ರ ಜನರಿಗೆ ಅವಕಾಶ ನೀಡಲಾಗಿದೆ.
ಅನೇಕ ರಾಜ್ಯಗಳಲ್ಲಿ ಮದುವೆಗೆ ಸಂಬಂಧಿಸಿದಂತೆ ಕೊರೋನಾ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಇದರಿಂದಾಗಿ ಮದುವೆಗೆ ಬರುವ ಅತಿಥಿಗಳು ಮತ್ತು ಸಂಬಂಧಿಕರ ಸಂಖ್ಯೆ ಸೀಮಿತವಾಗಿದೆ.
ಜನರು ಕೂಡಾ ಕೊರೋನಾದೊಂದಿಗೆ ನಿಧಾನವಾಗಿ ತಮ್ಮನ್ನು ತಾವು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಇದರ ಪರಿಣಾಮವನ್ನು ಆನ್ ಲೈನ್ ಸಭೆಗಳು ಮತ್ತು ಆನ್ ಲೈನ್ ತರಗತಿಗಳು ಮತ್ತು ವರ್ಕ್ ಫ್ರಮ್ ಹೋಂ ಮೂಲಕ ನೋಡಲಾಗುತ್ತಿದೆ.
ಇದೇ ವೇಳೆ ಜೋಡಿಯೊಂದು ತಮ್ಮ ಮದುವೆಗೆ ಸ್ಪೆಷಲ್ ಪ್ಲಾನ್ ಮಾಡಿದೆ.
ವಿಶಿಷ್ಟ ರೀತಿಯಲ್ಲಿ ವಿವಾಹ ಆಚರಿಸಲು ಮುಂದಾಗಿದೆ.
ಪಶ್ಚಿಮ ಬಂಗಾಳದ ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್ ಜನವರಿ 24 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.
ಕೊರೋನಾ ಪ್ರೋಟೋಕಾಲ್ ಅನ್ನು ಅನುಸರಿಸಿ, ಅವರು ಒಟ್ಟು 400 ಜನರ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ
ಇದನ್ನು ಕೇಳಿ ನೀವು ಶಾಕ್ ಆಗಬಹುದು ಯಾಕೆಂದರೆ 400 ಜನರು ಇದ್ದಲ್ಲಿ ಕೋವಿಡ್ ಪ್ರೋಟೋಕಾಲ್ ಅನುಸರಿಸದಂತಾಯಿತೇ ಎಂದು ಪ್ರಶ್ನೆ ಮೂಡಬಹುದು.
ವಾಸ್ತವವಾಗಿ ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್ ಅವರ ವಿವಾಹವು ಗೂಗಲ್ ಮೀಟ್ ಮೂಲಕ ನಡೆದಿದೆ. ಇದರ ಅಡಿಯಲ್ಲಿ ಅವರ ಮನೆಯಲ್ಲಿ ನಡೆಯಲಿರುವ ಮದುವೆಯಲ್ಲಿ ಒಟ್ಟು ನೂರು ಜನರು ಪಾಲ್ಗೊಳ್ಳಲಿದ್ದಾರೆ.
ಅದೇ ವೇಳೆ ಆತ್ಮೀಯರು ಮತ್ತು ಅತಿಥಿಗಳು ಸೇರಿ 300ಮಂದಿಯನ್ನು ಗೂಗಲ್ ಮೀಟ್ ನಲ್ಲಿ ಸೇರಿಸಲಾಗುತ್ತದೆ.
ಇದರೊಂದಿಗೆ ಹೊಸದಾಗಿ ಮದುವೆಯಾದ ಈ ಜೋಡಿಯನ್ನು ಆಶೀರ್ವದಿಸಿದವರಿಗೆ ಜೊಮ್ಯಾಟೋ ಮೂಲಕ ರುಚಿಕರವಾದ ಆಹಾರವನ್ನು ಅವರ ಮನೆಗೆ ತಲುಪಿಸಲಾಗುತ್ತದೆ ಹೇಗಿದೆ ನೋಡಿ ಈ ಜೋಡಿಯ ಐಡಿಯಾ.

