ಬಾದಾಮಿ: ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಿಂದ ಬರುವವರಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ನಾನು ಈ ಮೊದಲೂ ಹೇಳಿದ್ದೆ,ಈಗಲೂ ಹೇಳುತ್ತಿದ್ದೇನೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಹಲವರು ಬರುವುದಾಗಿ ಹೇಳಿದ್ದಾರೆ. ಆದರೆ ಅವರುಗಳ ಹೆಸರನ್ನು ಈಗ ಹೇಳುವುದಿಲ್ಲ ಎಂದು ತಿಳಿಸಿದರು.
ನಮ್ಮ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಯಾರು ಬೇಕಾದರೂ ಬರಬಹುದು ಅಂತವರಿಗೆ ಸ್ವಾಗತವಿದೆ ಎಂದು ಸಿದ್ದು ಹೇಳಿದರು.
ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ ಪಕ್ಷಗಳಿಂದ ಪಕ್ಷಕ್ಕೆ ಹೋಗುವುದು ಬರುವುದು ಸಹಜ ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬರುವವರು ಬರಲಿ ಎಂದರು

