ಹಿಜಾಬ್ ಹಿಂದೆ ರಾಜಕೀಯ ಪಿತೂರಿ ಶಿಕ್ಷಣ ಸಚಿವರ ಅಸಮಾಧಾನ

ಬೆಂಗಳೂರು: ಕುಂದಾಪುರದ ಸರ್ಕಾರಿ ಕಾಲೇಜಿಗೆ ಕೆಲವು ವಿದ್ಯಾರ್ಥಿ ನಿಯರು ಮಾತ್ರ ‌ಹಿಜಾಬ್ ಧರಿಸಿ‌ ಬರುತ್ತಿರುವುದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಶಿಕ್ಷಣ ಸಚಿವ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಇದು ಈಗ ರಾಷ್ಟ್ರೀಯ ವಿಚಾರವಾಗಿ ಮಾರ್ಪಾಡು ಆಗುತ್ತಿರುವುದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಹೇಳಿದರು

ರಾಷ್ಟ್ರದ ಸಮಗ್ರತೆ ಹಾಳು ಮಾಡಲು ನಡೆಯುತ್ತಿರುವ ಪಿತೂರಿ ಇದಾಗಿದೆ,

ಇದು ಆರು ಮಕ್ಕಳ ಎಜುಕೇಷನ್ ವಿಚಾರ, ಎಂಟು ರಾಷ್ಟ್ರಗಳಲ್ಲಿ ಹಿಜಾಬ್ ಬ್ಯಾನ್ ಆಗಿದೆ,ಆ ದೇಶಗಳಲ್ಲಿ ಯಾರು ಸಹ ವಿರೋಧ ಮಾಡಿಲ್ಲ ಅದು ಸುದ್ದಿ ಆಗಲಿಲ್ಲ ನಮ್ಮಲ್ಲಿ ಮಾತ್ರ ದೊಡ್ಡ ಸುದ್ದಿ ಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು

ಇಷ್ಟು ದಿನ ಹಿಜಾಬ್ ಇಲ್ದೆ ಬರ್ತಾ ಇದ್ದ ವಿದ್ಯಾರ್ಥಿಗಳು ಇದಕ್ಕಿಂದತೆ ಹಿಜಾಬ್ ಧರಿಸಿ ಬರುತ್ತಿದ್ದಾರೆ

ವಿದ್ಯಾರ್ಥಿಗಳಿಗೆ  ಶಿಕ್ಷಣದ ಬಗ್ಗೆ ಆಸಕ್ತಿ ಇದ್ದರೆ ಇಷ್ಟು ದಿನ ಹೇಗೆ ಬರುತ್ತಿದ್ದರು ಈಗಲೂ ಹಾಗೆ ಬರುತ್ತಾರೆ ಎಂದರು.

ಸಿದ್ದರಾಮಯ್ಯ ಅವರು ಕಾನೂನಿನ ಬಗ್ಗೆ ಮಾತನಾಡಿದ್ದಾರೆ ನಾನು ಕಾನೂನು ಪಂಡಿತ ಅಲ್ಲ ಎಂದು ತಿರುಗೇಟು ನೀಡಿದರು.

ನಮ್ಮ ದೇಶದಲ್ಲಿ ಸಾಂವಿಧಾನಿಕ ಹಕ್ಕು ಮತ್ತು ಧಾರ್ಮಿಕ ಹಕ್ಕು ಕೊಟ್ಟಿದ್ದಾರೆ.

ಸಮುದಾಯ ಹಕ್ಕು ಬಹಳ ಮುಖ್ಯ ಎಂದು   ಕೋರ್ಟ್  ತೀರ್ಪು ನೀಡಿದೆ

ಕೈ ಮುಗಿದು ಕೇಳುತ್ತೇನೆ ಸಿದ್ದರಾಮಯ್ಯ ಇಂತಹದನ್ನೆಲ್ಲ ಓದಿ ಕೊಂಡು ನಂತರ ಮಾತನಾಡಬೇಕು ಎಂದು ನಾಗೇಶ್ ಸಲಹೆ ನೀಡಿದರು.

ಆಯಾ ಶಿಕ್ಷಣ ಸಂಸ್ಥೆಗಳ ಎಸ್ ಡಿ ಎಮ್ ಸಿಗಳು  ತಮ್ಮ ಅಧಿಕಾರ ಬಳಸಿ ಸಮವಸ್ತ್ರವನ್ನು ಮೊದಲೆ ಪರಿಚಯಿಸಿದ್ದರೆ ಆ ಎಲ್ಲ ಶಾಲೆಗಳಿಗೂ ಈ ರೂಲ್ಸ್ ಅನ್ವಯ ಆಗುತ್ತದೆ ಎಂದು ಹೇಳಿದರು

ಎಸ್ ಡಿ ಎಮ್ ಸಿಗೆ ಹೈ ಕೋರ್ಟ್  ತೀರ್ಪು ಬರುವ ವರೆಗೆ ಹೊಸ ತರಹದ ಯಾವುದೆ ಆದೇಶ ಮಾಡಲು ನಾವು ಅವಕಾಶ ಕೊಟ್ಟಿಲ್ಲ ಎಂದು ‌ಸಚಿವರು ಸ್ಪಷ್ಟಪಡಿಸಿದರು