ಮೈಸೂರು: ಹಿಜಾಬ್ ಧರಿಸಿಯೇ ಶಾಲಾ ಕಾಲೇಜಿಗೆ ಬರುತ್ತೇವೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಹಿಜಾಬ್ ಕುರಿತು ಪ್ರತಿಕ್ರಿಯಿಸಿದ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ತಲೆದೋರಬಾರದು ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿಗೆ ಅವಕಾಶ ನೀಡುವುದಿಲ್ಲ ಎಂದರು.
ನಮ್ಮದೇಶದಲ್ಲಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ. ಹಿಜಾಬ್ ಹಿಂದೆ ಪಿತೂರಿ ಇದೆ, ಶಾಲೆಗಳಲ್ಲಿ ಹಿಜಾಬ್ ಬೆಂಬಲಿಸುವವರು ದೇಶದ್ರೋಹಿಗಳು ಎಂದು ಹೇಳಿದರು.
ಹಿಜಾಬ್ ಹೋರಾಟದ ಹಿಂದೆ ಉಗ್ರ ಸಂಘಟನೆ ಗಳ ಕೈವಾಡವಿದೆ ಎಂದು ಯತ್ನಾಳ್ ಆರೋಪಿಸಿದರು.

