ಬೆಂಗಳೂರು:ಉಡುಪಿಯ ರೇಷ್ಮ,ಮುಬಾರಕ್ ಮತ್ತಿತರರು ಸಲ್ಲಿದ್ದ ಹಿಜಬ್ ಧರಿಸಲು ಅವಕಾಶ ನೀಡಬೇಕೆಂಬ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಾಧೀಶರಾದ ಕೃಷ್ಣದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಅರ್ಜಿದಾರರ ಪರವಾಗಿ ದೆವದತ್ತ ಕಾಮತ್ ವಾದ ಮಂಡಿಸಿದರು.
ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ತಮ್ಮ ವಾದ ಮಂಡಿಸಿದರು.
ಎರಡೂ ಕಡೆಯ ವಕೀಲರ ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಕೃಷ್ಣದೀಕ್ಷಿತ್ ಅವರು ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ರಾಜ್ಯದಲ್ಲೆ ಎಲ್ಲಾ ಜನರು ಶಾಂತಿ ಕಾಪಾಡಬೇಕೆಂದು ನ್ಯಾಯ ಪೀಠ ಕೋರಿದೆ.
ಎಲ್ಲೂ ಕೂಡಾ ಸಂಘರ್ಷಗಳಿಗೆ ಅವಕಾಶ ಕೊಡುವುದಿಲ್ಲ ಎಂಬ ವಿಶ್ವಾಸವಿದೆ ಇದನ್ನು ಎಲ್ಲರೂ ಪಾಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದೂ ಕೂಡಾ ನ್ಯಾಯಾಲಯ ಹೇಳಿದೆ.

