ಹಿಜಬ್: ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಹಿಜಬ್ ಸಂಬಂದ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಮುಂದುವರೆದಿದ್ದು ಮತ್ತೆ ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ‌.

ಮೊದಲಿಗೆ ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಂಡಿಸಿ ಹಿಜಬ್ ಧರಿಸುವುದು  ಧಾರ್ಮಿಕ ಹಕ್ಕು ಅಲ್ಲ ಎನ್ನುವುದು ತಪ್ಪು, ಹಿಜಬ್ ಧರಿಸಬಾರದು ಎಂಬ ಸರ್ಕಾರದ ಆದೇಶ ಕಾನೂನು ಬಾಹಿರ, ಸರ್ಕಾರದ ಆದೇಶವೇ ತಪ್ಪು ಎಂದು ಅವರು ಹೇಳಿದರು.

ಈ ವೇಳೆ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ಥಿ ಮಾತನಾಡಿ ಧಾರ್ಮಿಕ ಹಕ್ಕು ಪರಮೋಚ್ಚವೇ ಎಂದು ಪ್ರಶ್ನಿಸಿದರು.ಧಾರ್ಮಿಕ ಹಕ್ಕುಗಳಿಗೆ ನಿರ್ಬಂಧ ಇದೆಯಾ ಇಲ್ಲವೋ ಎಂಬುದೇ ಪ್ರಶ್ನೆ, ಸರ್ಕಾರದ ಆದೇಶ ಧಾರ್ಮಿಕ ಹಕ್ಕನ್ನು ನಿರ್ಬಂಧಿಸಿದೆಯೆ ಎಂದು ಅವರು ಮತ್ತೆ ಪ್ರಶ್ನಿಸಿದರು.

ಯಾವಾಗಿನಿಂದ ಹಿಜಬ್ ಧರಿಸಿ ತರಗತಿಗೆ ಬರುತ್ತಿದ್ದೀರಿ ಎಂದು ಅರ್ಜಿದಾರರನ್ನು ಸಿಜೆ ಪ್ರಶ್ನಿಸಿದರು.

ಇದಕ್ಕೆ ನಾವು ಕಾಲೇಜಿನಲ್ಲಿ ಎರಡು ವರ್ಷದಿಂದ ಹಿಜಬ್ ಧರಿಸಿ ಬರುತ್ತಿದ್ದೇವೆ. ಸಮವಸ್ತ್ರ ಬಣ್ಣದ ಹಿಜಬ್ ಧರಿಸಿ ಬಂದರೆ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ಕೇಂದ್ರೀಯ ವಿದ್ಯಾಲಯಗಳಲ್ಲೂ ಹಿಜಬ್ ಧರಿಸಲು ಅವಕಾಶ ಇದೆ ಎಂದು ಹಲವಾರು ಉದಾಹರಣೆಗಳನ್ನು ದೇವದತ್ ಕಾಮತ್ ಅರ್ಜಿದಾರರ ಪರವಾಗಿ ವಾದಿಸಿದರು.

ಕೇರಳ,ಮದ್ರಾಸ್ ಹೈಕೋರ್ಟ್ ಆದೇಶಗಳನ್ನು ಅವರು ಉಲ್ಲೇಖಿಸಿದರು.

ಇನ್ನೂ ವಾದಗಳನ್ನು ಆಲಿಸುವುದು ಬಾಕಿ ಇದ್ದು ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನಕ್ಕೆ

ಹೈಕೋರ್ಟ್ ತ್ರಿಸದಸ್ಯ ಪೀಠ ಮುಂದೂಡಿತು.