ಹಿಜಬ್ ವಿವಾದ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಮಂಗಳವಾರ ಕೂಡಾ ಹಿಜಬ್ ಪ್ರಕರಣ ಸಂಬಂಧ ವಿಚಾರಣೆ ನಡೆದು ಬುಧವಾರಕ್ಕೆ ಮುಂದೂಡಿಕೆಯಾಯಿತು.

ಅರ್ಜಿದಾರರ ಪರ ಮೊದಲು ತಾರಿಕ್‌ ವಾದ ಮಂಡಿಸಿದರು.

ನಂತರ ದೇವದತ್ತ ಕಾಮತ್ ವಾದ ಪ್ರಾರಂಭಿಸಿದರು.

ನ್ಯಾಯಾಧೀಶರಾದ ಖಾಜಿ ಜೈಬುನ್ನೀಸ ಮೊಹಿಯುದ್ದೀನ್ ವಿಚಾರಣೆ ನಡೆಸಿದರು.

ಬೇರೆ, ಬೇರೆ ಧರ್ಮಗಳ ಸಂಪ್ರದಾಯಗಳು ಹಾಗೂ ಬೇರೆ ದೇಶಗಳ ಕೋರ್ಟ್ ಗಳು ನೀಡಿರುವ ತೀರ್ಪು ಗಳನ್ನು ದೇವದತ್ತ ಕಾಮತ್ ವಾದ ಮಂಡಿಸುವ ವೇಳೆ ಪ್ರಸ್ತುತ ಪಡಿಸಿದರು.

ವೇದ,ಉಪನಿಷತ್ ಗಳಲ್ಲೂ ದಾರ್ಮಿಕ ಸಂಪ್ರದಾಯದ ಉಲ್ಲೇಖವಿದೆ, ದಕ್ಷಿಣ ಆಫ್ರಿಕಾದ  ಕೋರ್ಟ್ ನಲ್ಲಿ ಮೂಗುತಿ ಧರಿಸುವ ಬಗ್ಗೆ ಸುನಾಲಿ ಪಿಳ್ಳೈ ವಾದ ಮಂಡಿಸಿದ್ದಳೆಂದು ದೇವದತ್ತ ಕಾಮತ್ ನ್ಯಾಯಾಧೀಶರ ಗಮನ ಸೆಳೆದರು.

ಆಗ ಅಲ್ಲಿನ ಹೈಕೋರ್ಟ್ ನೀಡಿದ ತೀರ್ಪನ್ನು ಕಾಮತ್ ಈ ವೇಳೆ ಉಲ್ಲೇಖಿಸಿದರು.

ಹೀಗೆ ಬೇರೆ‌ ಬೇರೆ ದೇಶಗಳ‌ ಹೈಕೋರ್ಟ್ ಗಳ‌ ತೀರ್ಪು ಗಳನ್ನು ದೇವದತ್ ಕಾಮತ್ ಉಲ್ಲೇಖಿಸಿದರು.

ಇವೆಲ್ಲವೂ ಧರ್ಮ ಪಾಲನೆಯ ಅಂಗ,ಹಾಗಾಗಿ ಹಿಜಬ್ ಕೂಡಾ ಧರ್ಮ ಪಾಲನೆಯಾಗಿದ್ದು ಇದನ್ನು ವಿದ್ಯಾರ್ಥಿನಿಯರು ಧರಿಸಲು ಅವಕಾಶ ನೀಡಬೇಕೆಂದು ಕಾಮತ್ ಮನವಿ ಮಾಡಿದರು.

ಶಾಲೆಗಳಲ್ಲಿ ಹಿಜಬ್ ಧರಿಸುವುದರಿಂದ ಸಮವಸ್ತ್ರ ನೀತಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದಿಲ್ಲ ಎಂದು ಅರ್ಜಿದಾರರ ಪರವಾಗಿ ಕಾಮತ್ ವಾದಿಸಿದರು.

ಬರೀ ಅರ್ಜಿದಾರರ ಪರ ವಾದ ಮುಂದುವರೆಯಿತು.

ದೇವದತ್ತ ಕಾಮತ್ ‌ಅವರು ಸುಮಾರು ಎರಡು ಗಂಟೆ ಕಾಲ ವಾದ ಮಾಡಿದರು. ಆಗ

ಮುಖ್ಯ ನ್ಯಾಯ ಮೂರ್ತಿ ರಿತುರಾಜ್ ಆವಸ್ಥಿ ಅವರು ಮಾತನಾಡಿ ಸೋಮವಾರ ವಾದ ಮಾಡುವಾಗ ಹತ್ತೇ ನಿಮಿಷದಲ್ಲಿ ವಾದ ಮುಗಿಸುತ್ತೇನೆ ಅಂದಿದ್ದಿರಿ,ನಮಗೇನು ತರಾತುರಿ ಇಲ್ಲ,ನಿಮಗೇ ತರ್ತು ಇರುತ್ತದೆ ಎಂದು ಹೇಳಿದರು.

ಅದಕ್ಕೆ ಬೇಗ ಮುಗಿಸಿಬಿಡುತ್ತೇನೆ‌ ಎಂದು ಉತ್ತರಿಸಿದರು.

ಕಡೆಗೆ ವಿಚಾರಣೆಯನ್ನು ತ್ರಿಸದಸ್ಯ ಪೀಠ ಬುಧವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.