ಹಿಜಬ್ ವಿವಾದ ಸಂಬಂಧದ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

ಬೆಂಗಳೂರು: ಹಿಜಬ್ ವಿವಾದ‌ ಸಂಬಂಧ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಮೊದಲು‌ ಅಲ್ಪ ಸಂಖ್ಯಾತ‌ ಶಿಕ್ಷಣ ‌ಸಂಸ್ಥೆಗಳ ಪರವಾಗಿ ಜಿ.ಆರ್.ಮೋಹನ್ ವಾದ ಮಂಡಿಸಿದರು.

ಅಲ್ಪ ಸಂಖ್ಯಾತ‌ ಶಿಕ್ಷಣ ‌ಸಂಸ್ಥೆಗಳಿಗೆ ಸಂವಿಧಾನದ‌ ರಕ್ಷಣೆ ಇದೆ.ನಮಗೆ ಸರ್ಕಾರದ ಆದೇಶ ಅನ್ವಯ ಆಗಬಾರದು ಎಂದು ಹೇಳಿದರು.

ಆಗ ನೀವು ರಿಟ್ ಅರ್ಜಿ ಸಲ್ಲಿಸಲು ನಿಮ್ಮ ಸಂಸ್ಥೆಯ ಅನುಮತಿ ಇದೆಯೆ ಎಂದು ಸಿಜೆ ಪ್ರಶ್ನಿಸಿದರು.

ಅದಕ್ಕೆ ಮೋಹನ್ ಇಲ್ಲ ಎಂದು ಉತ್ತರಿಸಿದರು.

ಸಂಸ್ಥೆಯ ಅನುಮತಿ ಇಲ್ಲದೆ ನೀವು ಹೇಗೆ ರಿಟ್ ಅರ್ಜಿ ಸಲ್ಲಿಸಿದಿರಿ. ಇದು ಆಘಾತಕಾರಿ ಬೆಳವಣಿಗೆ, ನೀವು ಸೋಮವಾರ ನಿಮ್ಮ ಒಕ್ಕೂಟದ ನಿರ್ಣಯ,ಬೈಲಾ,ಅಧಿಕಾರ ಪತ್ರ ಸಲ್ಲಿಸಿ ಎಂದು ಸಿಜೆ ರಿತುರಾಜ್ ಆವಸ್ತಿ ಸೂಚಿಸಿದರು.

ನಂತರ ಸರ್ಕಾರದ ಪರ ಪ್ರಭುಲಿಂಗ ನಾವಡಗಿ ವಾದ ಪ್ರಾರಂಭಿಸಿದರು.

ಸರ್ಕಾರದ ಪೆ.5ರ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಹಿಜಬ್ ಇಸ್ಲಾಂ ನ ಅತ್ಯಗತ್ಯ ಆಚರಣೆ ಅಲ್ಲ, ಹಿಜಬ್ ನಿರ್ಬಂಧ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗುವುದಿಲ್ಲ ತಿಳಿಸಿದರು.

ಮೊದಲಿಗೆ ಸರ್ಕಾರಕ್ಕೆ ಸಮವಸ್ತ್ರ ಕಡ್ಡಾಯ ಮಾಡುವ ಇರಾದೆ ಇರಲಿಲ್ಲ ಪರಿಸ್ಥಿತಿ ಕೈಮೀರಿದ್ದರಿಂದ ಸಮವಸ್ತ್ರ ತರಲಾಗಿದೆ ಎಂದು ವಾದಮಾಡಿದರು.

ಕಾಲೇಜಿನಲ್ಲಿ ಶಿಸ್ತು, ಸಮಾನತೆ ಇರಲಿ ಎಂದೂ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮವಸ್ತ್ರ ತರಲಾಗಿದೆ ಎಂದು ‌ನಾವಡಗಿ ಹೇಳಿದರು.

ಅರ್ಜಿದರರ ಪರ ತಾರಕ್ ಅವರು ವಾದ ಮಂಡಿಸಿದರು.

ಹೈಕೋರ್ಟ್ ತ್ರಿಸದಸ್ಯ ಪೀಠ ಎರಡೂ ಕಡೆಯ ವಾದ,ಪ್ರತಿವಾದ ಆಲಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.