ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಂತಿಗೆ ಭಂಗ -ಡಿಕೆಶಿ ವಾಗ್ದಾಳಿ

ಮೈಸೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಂತಿಗೆ ಅನೇಕ ಭಂಗಗಳು ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ದಲ್ಲಿ ಮಾಧ್ಯಮ ಸಂವಾದದಲ್ಲೆ ಅವರು ಮಾತನಾಡಿದರು.

ಶಾಂತಿಗೆ ಭಂಗ ಬಂದುದರಿಂದ ಸಾರ್ವಜನಿಕರ ಬದುಕಿಗೆ ತೊಂದರೆಗಳು ಉಂಟಾಯಿತು ಇದರಿಂದ ಜನರ ವಹಿವಾಟುಗಳಿಗೂ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊರೊನಾದಿಂದ ಬಹಳಷ್ಟು ಜನರ ಬದುಕು ನಾಶವಾಯಿತು. ಚಾಮರಾಜನಗರದಲ್ಲಿ ಎಂತಹ ದುರಂತವಾಯಿತು. ಅಂತಹ ಸಂದರ್ಭದಲ್ಲಿ ನಾನು ಸಿದ್ದರಾಮಯ್ಯನವರು ಹೋಗಿ ವಿಚಾರಿಸಿ ಹೋರಾಟ ನಡೆಸಿ  36ಮಂದಿ ಸತ್ತಿದ್ದಾರೆಂದು ಬೆಳಕಿಗೆ ತಂದೆವು ಎಂದು ಹೇಳಿದರು.

ನ್ಯಾಯಾಲಯ ಕೂಡ ಆದೇಶ ಕೊಟ್ಟಿತು. ಪ್ರತಿ ಕುಟುಂಬಕ್ಕೂ ಸಾಂತ್ವನ ಹೇಳಿ ಧೈರ್ಯ ತುಂಬಿ ಒಂದೊಂದು ಲಕ್ಷರೂ.ಪರಿಹಾರ ನೀಡಿ ದೇಶಕ್ಕೆ ಸಂದೇಶ ನೀಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಆದರೆ ಈಗಲೂ ಕೂಡ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಡಿಕೆಶಿ ಆರೋಪಿಸಿದರು.

ಮೈಸೂರಿನಲ್ಲಿ ಸ್ಥಳೀಯ ಮಾಧ್ಯಮಗಳು ಕೂಡ ಶಕ್ತಿಯುತವಾಗಿದೆ ಎಂದು ‌ಇದೇ ವೇಳೆ‌ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮನ್ನು ಭೇಟಿ ಮಾಡಬೇಕೆಂದು  ನಾನೇ ಸ್ವ ಇಚ್ಛೆಯಿಂದ ತೀರ್ಮಾನಿಸಿದ್ದೆ.ಮೈಸೂರು ಮಾಧ್ಯಮವನ್ನು  37-38 ವರ್ಷಗಳಿಂದ ಗಮನಿಸುತ್ತಾ ಇದ್ದೇನೆ ಬಹಳ ವೈಬ್ರೆಂಟ್ ಆಗಿವೆ ಎಂದು ‌ಶ್ಲಘಿಸಿದರು.

ನೀವೇನೇ ಸುದ್ದಿ ಮಾಡಿದರೂ ಕೂಡ ನಿಮ್ಮ  ಸುದ್ದಿ ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗುವುದನ್ನು ಗಮನಿಸಿದ್ದೇವೆ. ಇಲ್ಲಿರುವ ಪತ್ರಕರ್ತರು ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು ನೋಡಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಮತ್ತಿತರರಿದ್ದರು.