ಜನರಿಗೆ ವಿದ್ಯುತ್ ಶಾಕ್: ಅಕ್ಟೋಬರ್ ನಿಂದ ವಿದ್ಯುತ್ ದರ ಏರಿಕೆ

ಬೆಂಗಳೂರು: ನವರಾತ್ರಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ವಿದ್ಯುತ್ ಶಾಕ್  ತಟ್ಟಲಿದೆ.

ಅಕ್ಟೋಬರ್ 1 ರಿಂದಲೇ ಗ್ರಾಹಕರಿಗೆ ಶುಲ್ಕದ ಬರೆ ಬೀಳಲಿದೆ.

ಕಳೆದ ಏಪ್ರಿಲ್‍ನಲ್ಲಿ ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂ ನಲ್ಲಿ ವಿದ್ಯುತ್ ದರ ಏರಿಕೆಯಾಗಿತ್ತು.

ಪ್ರತಿ ಯೂನಿಟ್ ಮೇಲೆ 43 ಪೈಸೆ  ಏರಿಕೆಯಾಗಲಿದೆ. ಕಲ್ಲಿದ್ದಲಿನ ದರ ಏರಿಕೆಯಾದಾಗ ಈ ದರ ಏರಿಕೆ ಅನಿವಾರ್ಯ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಇಂಧನ ಹೊಂದಾಣಿಕೆ ಶುಲ್ಕವನ್ನು ಮೂರು ತಿಂಗಳಿಗೊಮ್ಮೆ ಕೆಇಆರ್‍ಸಿಗೆ ಪರಿಶೀಲನೆ ಮಾಡುವಂತೆ ಬೆಸ್ಕಾಂ ಮನವಿ ಮಾಡಿದೆ.

ಆದರೆ, ಸದ್ಯ ಆರು ತಿಂಗಳಿಗೆ ಅನ್ವಯವಾಗುವಂತೆ ದರ ಏರಿಕೆಯಾಗುತ್ತಿದೆ. ನವರಾತ್ರಿಯ ಸಂದರ್ಭದಲ್ಲೇ ಜನರಿಗೆ ಕೆಇಆರ್‍ಸಿ ಸರಿಯಾದ ಶಾಕ್ ನೀಡಿದೆ.