ಮೈಸೂರು: ನಾಡಹಬ್ಬದಸರಾ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ಇಂದು ಬೆಳಿಗ್ಗೆ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ಅದ್ದೂರಿ ಮೈಸೂರು ದಸರಾ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡದಲ್ಲಿ ನಾಡಿನ ಜನತೆಗೆ ದಸರಾ ಹಬ್ಬದ ಶುಭ ಕಾಮನೆ ಸಲ್ಲಿಸಿದ ಮುರ್ಮು ದೇವಿ ಚಾಮುಂಡೇಶ್ವರಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಜನರಿಗೆ ದೇವಿ ಚಾಮುಂಡೇಶ್ವರಿ ನಾಡಿನ ಜನರಿಗೆ ಸದಾಕಾಲ ಒಳಿತು ಮಾಡಲಿ ಎಂದು ಹಾರೈಸಿದರು.
ನಾನು ರಾಷ್ಟ್ರಪತಿ ಆದ ಮೇಲೆ ದೇಶದ ಕಾರ್ನಾಟಕ ರಾಜ್ಯಕ್ಕೆ ಮೊದಲ ಭೇಟಿ ಮಾಡುತ್ತಿದ್ದೇನೆ.ಜತೆಗೆ ಶಕ್ತಿ ಪೀಠವಾದ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದು ಹೇಳಿದರ
ಮಹಿಷನ ಮಣಿಸಿದ ಚಾಮುಂಡೇಶ್ವರಿ ದೇವಿ ನೆಲೆಸಿರುವ ಈ ಚಾಮುಂಡಿಬೆಟ್ಟ ಪ್ರಮುಖ ಶಕ್ತಿ ಪೀಠವಾಗಿದೆ ಎಂದು ಹೇಳಿದರು.
ದೇಶ,ವಿದೇಶಗಳಿಂದ ಭಕ್ತರು ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಆಗಮಿಸಿತ್ತಾರೆ.
ಆದಿ ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿ ಹಿಂದೂಧರ್ಮ ಪ್ರಚಾರ ಮಾಡಿದರು ಎಂದು ಸ್ಮರಿಸಿದ ರಾಷ್ಟ್ರಪತಿ ಗಳು ಅಕ್ಕಮಹಾದೇವಿ,ಅಲ್ಲಮಪ್ರಭು ಸೇರಿದಂತೆ ಎಲ್ಲ ಶರಣರನ್ನು ಸ್ಮರಿಸಿದರು
ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಯಾವುದೇ ಜಾತಿ ಧರ್ಮದ ಬೇಧಭಾವ ಮಾಡದೆ ಎಲ್ಲರಿಗೂ ಶರಣ ಸಂಸ್ಕೃತಿ ತಿಳಿಸಿಕೊಟ್ಟರು ಎಂದು ಹೇಳಿದರು.
ಅನುಭವಮಂಟಪದಲ್ಲಿ ಧರ್ಮ ಹಾಗೂ ಸಾಮಾಜಿಕ ಚರ್ಚೆ ನಡೆಯುತ್ತಿತ್ತು.
ಮೈಸೂರು ದಸರಾ ದೇಶದ ಸಾಂಸ್ಕೃತಿಕ ಪ್ರತೀಕವಾಗಿದೆ ಎಂದು ಬಣ್ಣಿಸಿದರು.
ಪ್ರಾಥಮಿಕ ಶಿಕಷಣದಲ್ಲಿ ಶೇ.100ರಷ್ಟು ಸಾಧನೆಯನ್ನು ಕರ್ನಾಟಕ ಮಾಡಿದೆ.ಪ್ರಧಾನಮಂತ್ರಿ ಗ್ರಾಮೀಣ ರೋಜ್ಗಾರ್ ಯೋಜನೆಯಲ್ಲೂ ಕರ್ನಾಟಕ ಮುಂದಿದೆ ಎಂದು ರಾಜ್ಯದ ಯೋಜನೆಗಳು ಹಾಗೂ ಅಭಿವೃದ್ಧಿ ಯನ್ನು ಮರ್ಮು ಕೊಂಡಾಡಿದರು.
ತಮ್ಮನ್ನು ನಾಡಹಬ್ಬ ಉದ್ಘಟನೆಗೆ ಆಹ್ವಾನಿಸಿದ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿತ್ತೇನೆ ಎಂದು ಅವರು ತಿಳಿಸಿದರು.

