ಎಸ್ ಡಿಪಿಐ – ಪಿಎಫ್ ಐ ಬಗ್ಗೆ ವಿಸ್ತೃತ ತನಿಖೆಯಾಗಲಿ:ಮುತಾಲಿಕ್

ಧಾರವಾಡ: ದೇಶದ್ರೋಹಿ ಸಂಘಟನೆಗಳಾದ ಎಸ್ ಡಿಪಿಐ ಮತ್ತು ಪಿಎಫ್ ಐ ಹಳ್ಳಿ ಹಳ್ಳಿಗೂ ಕ್ಯಾನ್ಸರ್ ನಂತೆ ವ್ಯಾಪಿಸಿವೆ.ಹಾಗಾಗಿ  ಇವುಗಳ ಬಗ್ಗೆ ತನಿಖೆಯಾಗಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಪಿಎಫ್ ಐ ಮುಖಂಡರ ಮೇಲೆ ಪೊಲೀಸರ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು ಎಸ್.ಡಿಪಿಐ ಮತ್ತು ಪಿಎಫ್ ಐ  ಸಮಾಜ ಕಂಟಕ ಸಂಘಟನೆಗಳಾಗಿವೆ ಎಂದರು.

ಎಸ್ ಡಿಪಿಐ, ಪಿಎಫ್ಐ ಸಂಘಟನೆಗಳು ಆರ್ ಎಸ್ ಎಸ್ ಅನ್ನು ಟಾರ್ಗೆಟ್ ಮಾಡಿದ್ದವು.ಕಾರಿನ ಮೇಲೆ ಜಿಹಾದಿ ಕೊಲೆ ಎಂದು ಬರೆದಿದ್ದರು. 

ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕ್ರಮ ಅಭಿನಂದನಾರ್ಹ‌. ಈ ಸಂಘಟನೆಗಳ ಬಗ್ಗೆ ವಿಸ್ತಾರವಾಗಿ ತನಿಖೆಯಾಗಲಿ ಎಂದು ಮುತಾಲಿಕ್ ಹೇಳಿದರು.

ಪಿಎಫ್ ಐ ಮುಖಂಡರ ಮನೆಗಳನ್ನು ಜಾಲಾಡಿದರೆ  ಶಸ್ತ್ರಾಸ್ತ್ರಗಳು ಸಿಗುತ್ತವೆ ಎಂದು ತಿಳಿಸಿದರು.