ಬೆಂಗಳೂರು: ಎಸ್ ಡಿ ಪಿಐ,ಪಿಎಫ್ ಐ ಸಂಘಟನೆಗಳು ಬಾಲಬಿಚ್ಚಲು ಮಾಜಿಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದಾಗ ಪಿಎಫ್ ಐ ಹಾಗೂ ಎಸ್ ಡಿ ಪಿ ಐ ಸಂಘಟನೆಯ ಸಾವಿರಕ್ಕೂ ಹೆಚ್ಚು ಮಂದಿಯ ಮೇಲಿದ್ದ ಕೇಸುಗಳನ್ನು ವಾಪಸು ಪಡೆದರು ಅದರ ಪರಿಣಾಮವೇ ಇತ್ತೀಚಿನ ಕೆಲ ಘಟನೆಗಳು ನಡೆಯಲು ಕಾರಣವಾಗಿದೆ ಎಂದು ದೂರಿದರು.
ಪಿಎಫ್ ಐ ಹಾಗೂ ಎಸ್ ಡಿ ಪಿ ಐ ಸಂಘಟನೆಯವರನ್ನು ಬಂಧಿಸಿದ್ದಾಗ ಬಹಳಷ್ಟು ಮಂದಿ ಅಮಾಯಕರನ್ನೂ ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅಂದು ಅಮಾಯಕರನ್ನು ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ನಡೆದಿರುವ ಕೆಲ ಘಟನೆಗಳಲ್ಲಿ ಈ ಸಂಘಟನೆಗಳ ಕೈವಾಡವಿರುವುದು ಗೊತ್ತಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು.
ಈ ಸಂಘಟನೆಗಳ ಬಂಡಾಟ ಬಯಲಾಗಿದೆ.ಅದಕ್ಕೆ ಪೂರಕವಾದ ದಾಖಲೆಗಳು ಲಭ್ಯವಾಗಿದ್ದರಿಂದಲೇ ಎನ್‌ಐಎ ದಾಳಿ ಮಾದಿದೆ ಎಂದು ಕಟೀಲ್ ಹೇಳಿದರು.
ಈ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕಿದೆ ಈಗ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.

