ಪಿಎಫ್ಐ ನಿಷೇಧ ಸ್ವಾಗತಿಸಿದ ಬೊಮ್ಮಾಯಿ

ಬೆಂಗಳೂರು: ಪಿಎಫ್ ಐ ಸಂಘಟನೆಯನ್ನ 5 ವರ್ಷಗಳ ಕಾಲ ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನ ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಕೆಎಫ್ ಡಿ ಸಿಮಿ ರೂಪಾಂತರ ಫಲಶೃತಿ ಪಿಎಫ್ ಐ ಎಂದರು.

ಪಿಎಫ್ ಐ ವಿಧ್ವಂಸಕ ಕೃತ್ಯ ನಡೆಸಿರೋದು ಗೊತ್ತಾಗಿದೆ. ಈ ಬಗ್ಗೆ ಎಲ್ಲರೂ ಒತ್ತಾಯ ಮಾಡಿದ್ದರು.

ನಮ್ಮ ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಅವಕಾಶವಿಲ್ಲ ಮೋದಿ ಅಮಿತ್ ಶಾ ನಾಯಕತ್ವದಲ್ಲಿ  ಪಿಎಫ್ ಐ ಬ್ಯಾನ್ ಆಗಿದೆ ಎಂದು ಹೇಳಿದರು.

ಪಿಎಫ್​​ಐ ನಿಷೇಧಿಸುವಂತೆ ವಿರೋಧ ಪಕ್ಷದವರೂ ಸೇರಿದಂತೆ ಎಲ್ಲರೂ ಮನವಿ ಮಾಡಿದ್ದೆವು. ಇದೀಗ ಉತ್ತರ ಸಿಕ್ಕಿದೆ ಎಂದರು.

ಪಿಎಫ್​ಐ ಕಾರ್ಯಕರ್ತರು  ದುಷ್ಕೃತ್ಯ ನಡೆಸಲು ಮುಂದಾಗಿದ್ದರು. ಹಲವು ದೇಶದ್ರೋಹ ಚಟುವಟಿಕೆಗಳಲ್ಲಿಯೂ ಪಿಎಫ್​ ಐ ಭಾಗಿಯಾಗಿತ್ತು ಹಾಗಾಗಿ ನಿಷೇಧ ಮಾಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.