ನವದೆಹಲಿ: ಕರ್ನಾಟಕದ ಹಿಜಾಬ್ ವಿವಾದದ ಪ್ರಕರಣ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
ಇದಕ್ಕೆ ಕಾರಣ ಹಿಜಾಬ್ ವಿವಾದದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಭಿನ್ನ ತೀರ್ಪು ಪ್ರಕಟವಾಗಿರುವುದು.
ಹಿಜಾಬ್ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಹೇಮಂತ್ ಗುಪ್ತ ಅವರಿದ್ದ ದ್ವಿಸದಸ್ಯ ಪೀಠ ಒಟ್ಟಾದ ತೀರ್ಪು ನೀಡದ್ದು ವಿಭಿನ್ನ ತೀರ್ಪು ಬಂದಿದೆ.
ಹಿಜಾಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಹೇಮಂತ್ ಗುಪ್ತ ಅವರು
ರದ್ದು ಮಾಡಿದ್ದರೆ, ಸುಧಾಂಶು ಧುಲಿಯಾ ಅವರು ಹೈಕೋರ್ಟ್ ಆದೇಶ ಎತ್ತಿ ಹಿಡಿದಿದ್ದಾರೆ.
ಇಬ್ಬರು ಜಡ್ಜ್ ಗಳು ವಿಭಿನ್ನ ತೀರ್ಪು ನೀಡಿರುವ ಕಾರಣ ಈ ವಿವಾದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ವಿಭಾಗೀಯ ಪೀಠಕ್ಕೆ ವರ್ಗಾವಣೆಗೊಂಡಿದೆ.

