ಮೈಸೂರು: ಮೈಸೂರಿನ ಜೆ ಎಲ್ ಬಿ ರಸ್ತೆಯ ಲ್ಲಿರುವ ಮಾಹಾರಾಣಿ ಕಾಲೇಜಿನ ಒಂದು ಭಾಗ ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದಿದೆ.
ಅದೃಷ್ಟವಶಾತ್ ಆ ಸಮಯದಲ್ಲಿ ಯಾರೂ ಅಲ್ಲಿ ಇರದ ಕಾರಣ ಯಾವುದೇ ಅಪಾಯವಾಗಿಲ್ಲ.
ಮಹಾರಣಿ ವಿಜ್ಞಾನ ಕಾಲೇಜಿನ ಲ್ಯಾಬ್ ನ ಕಟ್ಟಡದ ಒಂದು ಭಾಗ ಕುಸಿದುಬಿದ್ದಿದೆ.
ಈ ಭಾಗ ಸ್ವಲ್ಪ ಶಿಥಿಲವಾಗಿದ್ದರಿಂದ ಮುನ್ನೆಚ್ಚರಿಕೆಯಾಗಿ ಕಟ್ಡಡ ರಿಪೇರಿಗೆ ಗುತ್ತಿಗೆ ನೀಡಲಾಗಿದೆ.
ಗುತ್ತಿಗೆದಾರ ಶುಕ್ರವಾರ ಬೆಳಿಗೆ ಕಟ್ಟಡದ ವಿಡಿಯೋ ಮಾಡುತ್ತಿದ್ದಾಗಲೇ ಕಟ್ಟಡದ ಒಂದು ಭಾಗ ಕುಸಿದಿದೆ.ಹಾಗಾಗಿ ಗೋಡೆ ಬೀಳುವ ಲೈವ್ ದೊರೆತಿದೆ.
ಲ್ಯಾಬ್ ಆದ್ದರಿಂದ ಆ ಭಾಗಕ್ಕೆ ಇನ್ನೂ ಯಾರೂ ವಿದ್ಯಾರ್ಥಿನಿಯರು ಬಂದಿರಲಿಲ್ಲ.
ಏನಾದರೂ ಆ ಕಟ್ಟಡದ ಭಾಗದಲ್ಲಿ ಯಾರಾದರೂ ಇದ್ದರೆ ಭಾರೀ ಅನಾಹುತ ಸಂಭವಿಸುತಿತ್ತು.
ಇತ್ತೀಚೆಗೆ ನಗರದಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ವಸ್ತಿ ಹಿಡಿದ ಕಟ್ಟಡ
ಬೆಳಿಗ್ಗೆ ದಿಢೀರ್ ಕುಸಿದಿದೆ.
ಕಟ್ಟಡಬಿದ್ದ ಕಾರಣ ವಿದ್ಯಾರ್ಥಿಗಳಿಗೆ ರಜೆ ನೀಡಿ ಮನೆಗೆ ಕಳುಹಿಸಲಾಗಿದೆ.

