ರುದ್ರಪ್ರಯಾಗ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಮುಂಜಾನೆ ಉತ್ತರಾಖಂಡ್‍ನ ಕೇದಾರನಾಥ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಉಡುಗೆ ಚೋಲಾದೋರಾ ಧರಿಸಿ ವಿಶೇಷ ಪೂಜೆ ಸಲ್ಲಿಸಿದರು.
ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡ್‍ಗೆ ಆಗಮಿಸಿರುವ ಮೋದಿ
ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುವರು.
ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಕೇದಾರನಾಥ ದೇವಸ್ಥಾನವನ್ನು ಪುಷ್ಪ ಅಲಂಕಾರ ಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ.
ಇತ್ತೀಚೆಗೆ ಪ್ರಧಾನಿಯವರು ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದಾಗ ಚಂಬಾ ಜಿಲ್ಲೆಯ ಮಹಿಳೆಯೊಬ್ಬರು ಕಸೂತಿ ಮಾಡಿದ ಚೋಲಾದೋರಾ ಉಡುಪನ್ನು ಉಡುಗೊರೆ ನೀಡಿದ್ದರು.
ಅಪ್ಪಟ ಶ್ವೇತಬಣ್ಣದ ಈ ಉಡುಗೆ ವಿವಿಧ ಕಸೂತಿ ಕಲೆಗಳಿಂದ ಕೂಡಿದೆ. ಇದೇ ವಸ್ತ್ರವನ್ನು ಧರಿಸಿ ಪ್ರಧಾನಿಯವರು ಕೇದಾರನಾಥದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್‍ಸಿಂಗ್ ದಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಧಾನಮಂತ್ರಿಯವರು ಕೇದಾರನಾಥದ ಆದಿಗುರು ಶಂಕರಾಚಾರ್ಯರ ಪುಣ್ಯಭೂಮಿಗೂ ಭೇಟಿ ನೀಡಿ ನಮನ ಸಲ್ಲಿಸಿದರು.
ಬಳಿಕ 3400 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಬದ್ರಿನಾಥ, ಕೇದಾರನಾಥ ಹಾಗೂ ವಿವಿಧ ಕಡೆ ಪ್ರಧಾನಿಯವರ ಪ್ರವಾಸದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿದೆ

