ನವದೆಹಲಿ: ಮೈ ಕೊರೆಯುವ ಕಾರ್ಗಿಲ್ ಪ್ರದೇಶದಲ್ಲಿ ದೇಶ ಕಾಯುವ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಿದರು.
2014ರಲ್ಲಿ ಪ್ರಧಾನ ಮಂತ್ರಿ ಪಟ್ಟಕೇರಿದ ದಿನದಿಂದಲೂ ಮೋದಿ ಪ್ರತಿ ವರ್ಷ ದೇಶ ಕಾಯುವ ವೀರ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿಕೊಂಡು ಬರುತ್ತಿರುವುದು ವಿಶೇಷ.
ಸರಯೂ ನದಿ ತಟದಲ್ಲಿ ಪೂಜಾಕಾರ್ಯ ಕೂಡಾ ನೆರವೇರಿಸಿ ದೇಶದ ಒಳಿತಿಗಾಗಿ ಮೋದಿ ಪ್ರಾರ್ಥಿಸಿ ದರು.
ಈಗಾಗಲೆ ಹಲವಾರು ಮಿಲಿಟರಿ ಕೇಂದ್ರಗಳಿಗೆ ಭೇಟಿ ನೀಡಿ ದೀಪಾವಳಿ ಹಬ್ಬ ಆಚರಿಸಿರುವ ಮೋದಿ ಅವರು ಸೋಮವಾರ ಬೆಳಿಗ್ಗೆ ಕಾರ್ಗಿಲ್‍ಗೆ ಭೇಟಿ ನೀಡಿ ಅಲ್ಲಿನ ಯೋಧರೊಂದಿಗೆ ಹಬ್ಬ ಆಚರಿಸಿ ಸಂಭ್ರಮಿಸಿದರು.
ಈ ವೇಳೆ ಪ್ರಧಾನಿಯವರು ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು.
ಈ ಮಂಗಳಕರ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಯೋಗಕ್ಷೇಮದ ಚೈತನ್ಯವನ್ನು ಹೆಚ್ಚಿಸಲಿ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಬ್ಬ ಆಚರಿಸಿ ಖುಷಿ ಪಡಿ ಎಂದು ಪ್ರಧಾನಿ ಹೇಳಿದ್ದಾರೆ.

