ಬೆಂಗಳೂರು: ಬೆಂಗಳೂರು ಸಮೀಪದ ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೇಮಠದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ(34)ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಬೆಟ್ಟದ ಮೇಲಿನ ಮನೆಯಲ್ಲಿ ಸ್ವಾಮೀಜಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಕೊಠಡಿಯಲ್ಲಿ ಮೂರು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು ಪೊಲೀಸರ ತನಿಖೆಯಿಂದ ಸ್ವಾಮೀಜಿಯವರ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಬಹುತೇಕ ಭಕ್ತರು ಬಸವಲಿಂಗ ಸ್ವಾಮೀಜಿಯವರು ಯಾವುದೇ ಖಿನ್ನತೆಗೆ ಒಳಗಾಗಿರಲಿಲ್ಲ ಅವರು ಎಲ್ಲರಿಗೂ ಬುದ್ದಿವಾದ ಹೇಳುತ್ತದ್ದರು,ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ರಾತ್ರಿ ಕೂಡಾ ಎಂದಿನಂತೆ ಪೂಜಾ ಕಾರ್ಯ ಮಾಡಿದ್ದರು ಊಟ ಮಾಡಿ ಮೇಲಿನ ಕೊಠಡಿಗೆ ಸ್ವಾಮೀಜಿ ಹೋಗಿದ್ದರು ಅವರ ಮನಸ್ಥಿತಿ ಚೆನಾಗಿಯೇ ಇತ್ತು.ಅವರಿಗೆ ಯಾವುದೇ ಬೇಸರವೂ ಇರಲಿಲ್ಲ ಆರಾಮವಾಗಿದ್ದರು, ಆತ್ಮಹತ್ಯೆ ಮಾಡಿಕೊಳುವಂತಹ ಸ್ಥಿತಿ ಅವರಿಗೆ ಇರಲಿಲ್ಲ ಎಂದು ಸ್ವಾಮೀಜಿಯವರ ಕಾರು ಚಾಲಕ ತಿಳಿಸಿದ್ದಾರೆ.

