ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಾಮನಿ ನಿಧನ

ಬೆಂಗಳೂರು- ಕಳೆದ ಕೆಲವಹ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಚಂದ್ರಶೇಖರ್ ಮಾಮಿನಿ ಅವರು ನಿಧನ ಹೊಂದಿದ್ದಾರೆ.

ಮಾಮನಿ ಅವರು ಪತ್ನಿ ರತ್ನಾ ಆನಂದ, ಪುತ್ರ ಪುತ್ರಿ ಹಾಗೂ ಆಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಆಗಲಿದ್ದಾರೆ.

ಆನಂದ ಮಾಮನಿ ಅವರು ಕ್ಯಾನ್ಸರ್ ಕಾಯಿಲೆಯಿಂದಾಗಿ ಕೆಲ ದಿನಗಳಿಂದ ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆಂಗಳುರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

ಒಂದು ತಿಂಗಳಿನಿಂದ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಮಿನಿ ಅವರು ಶನಿವಾರ ಮಧ್ಯರಾತ್ರಿ 12.45 ಕ್ಕೆ ಕೊನೆಯುಸಿರೆಳೆದಿದ್ದಾರೆ.

ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಅಸ್ಪತ್ರೆಗೆ ತೆರಳಿ
ಅಂತಿಮ‌ ದರ್ಶನ ಪಡೆದು,ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಆನಂದ ಮಾಮನಿ ಸಹ ರಾಜಕೀಯ ಹಿನ್ನೆಲೆಯ ಕುಟುಂಬದಿಂದಲೇ ಬಂದವರು.

ಅವರ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 6 ಬಾರಿ ಗೆದ್ದು ಜನ ಸೇವೆ ಮಾಡಿದ್ದರು ತಂದೆ ಚಂದ್ರಶೇಖರ ಮಾಮನಿ 1998ರಲ್ಲಿ ವಿಧಾನಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅವರ ನಿಭಾಯಿಸಿದ ಹುದ್ದೆಯನ್ನೇ ಪಡೆದುಕೊಳ್ಳುವಲ್ಲಿ ಆನಂದ ಮಾಮನಿ ಯಶಸ್ವಿಯಾಗಿದ್ದರು.

ಚಂದ್ರಶೇಖರ್ ಮಾಮನಿ 1985 ಪಕ್ಷೇತರ ಹಾಗೂ 1994ರಲ್ಲಿ ಜನತಾ ದಳದಿಂದ ಜಯಗಳಿಸಿದ್ದರು. ನಂತರ 1999ರಲ್ಲಿ ಗಂಗೂತಾಯಿ ಮಾಮನಿ ಸಹ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. 2004ರಲ್ಲಿ ವಿಶ್ವನಾಥ ಮಾಮನಿ ಒಮ್ಮೆ ಆಯ್ಕೆಯಾಗಿದ್ದರು. ನಂತರ 2008, 2013 ಹಾಗೂ 2018ರಲ್ಲಿ ಆನಂದ ಮಾಮನಿ ಸತತವಾಗಿ ಆಯ್ಕೆಯಾಗಿದ್ದರು.

ಕೇವಲ ರಾಜಕೀಯ ಕ್ಷೇತ್ರವಲ್ಲದೆ,ಆನಂದ್ ಮಾಮಿನಿ ಅವರು ಅನೇಕ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.

ಉಪಸಭಾಧ್ಯಕ್ಷ ಆನಂದ್ ಮಾಮಿನಿ ಅವರ
ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ಸಚಿವರಾದ ಗೋವಿಂದ ಕಾರಜೋಳ, ಆರ್ ಅಶೋಕ್, ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಶ್ರೀರಾಮುಲು, ಅಶ್ವತ್ ನಾರಾಯಣ, ಗೋಪಾಲಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.