ದಾವಣಗೆರೆ: ನನ್ನ ತಮ್ಮನ ಮಗ ಚಂದ್ರು ಸಾವಿನ ಹಿಂದೆ ಯಾವುದೋ ಕೈವಾಡವಿದೆ.ಪೊಲೀಸರು ಶೀಘ್ರ ತನಿಖೆ ಮಾಡಿ ಸತ್ಯ ಬಯಲಿಗೆಳೆಯಬೇಕು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ನನ್ನ ಮಗ ಚಂದ್ರು ಅಪಘಾತವಾಗಿ ಸಾವನ್ನಪ್ಪಿಲ್ಲ,ಅವನನ್ನು ಯಾರೋ ಕೊಲೆ ಮಾಡಿ ಅಪಘಾತವಾದಂತೆ ಬಿಂಬಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಚಂದ್ರು ಶಿವಮೊಗ್ಗಕ್ಕೆ ಹೋಗಿ ವಿನಯ್ ಗುರೂಜಿಯವರನ್ನ ಭೇಟಿ ಮಾಡಿ ನಂತರ ಸ್ನೇಹಿತನನ್ನು ಅಲ್ಲಿ ಬಿಟ್ಟು ಹೊನ್ನಾಳಿ ಕಡೆಗೆ ಒಬ್ಬನೇ ಬರುತ್ತಿದ್ದ.
ಆದರೆ ಮಾರ್ಗ ಮಧ್ಯೆ ಏನೋ ಆಗಿದೆ.ಕಾರು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ.ಅದನ್ನು ಮೇಲಿತ್ತಿದಾಗ ಚಂದ್ರು ದೇಹ ಹಿಂಬದಿಯ ಸೀಟಿನಲ್ಲಿ ಪತ್ತೆಯಾಗಿದೆ.
ಅವನ ಕೈ ಕಾಲು ಕಟ್ಟಲಾಗಿತ್ತು,ಬೆನ್ನು ಮತ್ತು ಕುತ್ತಿಗೆಯಲ್ಲಿ ಮಚ್ಚಿನಿಂದ ಕೊಚ್ಚಿದ ಗಾಯಗಳಾಗಿದೆ.ಇದನ್ನೆಲ್ಲಾ ನೋಡಿದರೆ ನನಗೆ ಅನುಮಾನ ಕಾಡಿತ್ತಿದೆ.ಇದು ಅಪಘಾತವಲ್ಲ,ನನ್ನ ಮಗನನ್ನು ಕೊಂದು ಕಾರನ್ನು ಕಾಲುವೆಗೆ ತಳ್ಳಿದ್ದಾರೆ ಎಂದು ಹೇಳಿದರು.
ಇಂತವರೇ ಎಂದು ಹೇಳಲಾಗುತ್ತಿಲ್ಲ.ಆರು ತಿಂಗಳ ಹಿಂದೆ ನನಗೆ ಇಂಟರ್ ನೆಟ್ ಕಾಲ್ ಬಂದಿತ್ತು.
ಧರ್ಮ ಹಾಗೂ ಹಿಜಬ್ ಬಗ್ಗೆ ಮಾತನಾಡುತ್ತೀರಾ,ನೀನು ಮತ್ತು ನಿಮ್ಮ ಕುಟುಂಬವನ್ನು ಮುಗಿಸುತ್ತೇವೆ ಎಂದು ಅನಾಮದೇಯರು ಬೆದರಿಕೆ ಹಾಕಿದ್ದರು.ಈ ಬಗ್ಗೆ ಆಗಲೇ ಪೊಲೀಸರಿಗೆ ದೂರು ನೀಡಿದ್ದೆ ಎಂದು ತಿಳಿಸಿದರು.
ಆ ಸಂಘಟನೆಯವರ ಕೈವಾಡವಿರಬೇಕು ಎಂಬ ಶಂಕೆ ಇದೆ.ಅವರೇ ಹತ್ಯೆ ಮಾಡಿದ್ದಾರೆ.
ನಾನೇ ಮಗನ ಸಾವಿಗೆ ಕಾರಣನಾದೆ ಎಂದು ರೇಣುಕಾಚಾರ್ಯ ಮರುಗಿದರು.
ಮಗನ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಎಂದು ಅವರು ಪೊಲೀಸರನ್ನು ಆಗ್ರಹಿಸಿದರು.

