ಜಮ್ಮು: ನೆರೆಯ ಪಾಕಿಸ್ತಾನದಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಮೂಲಕ ಕಳ್ಳಸಾಗಾಣಿಕೆ ಹೆಚ್ಚುತ್ತಿದ್ದು ಅಲ್ಲಿ ಭದ್ರತಾ ಪರಿಸ್ಥಿತಿಯನ್ನು ಪಶ್ಚಿಮ ಕಮಾಂಡ್‍ನ ಬಿಎಸ್‍ಎಫ್ ಹೆಚ್ಚುವರಿ ಮಹಾನಿರ್ದೇಶಕ ಪಿ. ವಿ. ರಾಮಶಾಸ್ತ್ರಿ ಪರಿಶೀಲಿಸಿರು.
ಮೂರು ದಿನಗಳ ಭೇಟಿಗಾಗಿ ಚಂಡೀಗಢದಿಂದ ಜಮ್ಮುವಿಗೆ ಆಗಮಿಸಿದ ಶಾಸ್ತ್ರಿ ಅವರನ್ನು ಗಡಿ ಭದ್ರತಾ ಪಡೆಯ ಇನ್‍ಸ್ಪೆಕ್ಟರ್ ಜನರಲ್ ಜಮ್ಮು ಫ್ರಾಂಟಿಯರ್ ಡಿ. ಕೆ. ಬೂರಾ ನೇತೃತ್ವದ ಉನ್ನತ ಅಧಿಕಾರಿಗಳು ಸ್ವಾಗತಿಸಿದರು.
ಬೂರಾ ಅವರು ಗುಪ್ತಚರ ಭದ್ರತೆ ಸೇರಿದಂತೆ ನಿರ್ಣಾಯಕ ಅಂಶಗಳ ಕುರಿತು ಹೆಚ್ಚುವರಿ ಮಹಾನಿರ್ದೇಶಕರಿಗೆ ಮಾಹಿತಿ ನೀಡಿದರು ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್‍ಎಫ್ ಬೆಟಾಲಿಯನ್‍ಗಳ ನಿಯೋಜನೆ ಮತ್ತು ಗಡಿಯಲ್ಲಿ ದೃಢವಾದ ಪ್ರಾಬಲ್ಯದ ಅಂಶಗಳನ್ನು ಒಳಗೊಂಡ ಪ್ರದೇಶದ ಸಾಮಾನ್ಯ ಭದ್ರತಾ ಸನ್ನಿವೇಶವನ್ನು ವಿವರಿಸಿದ್ದಾರೆ.
ಸುರಂಗ, ಡ್ರೋನ್ ಮೂಲಕ ದೇಶ ವಿರೋಧಿ ಕೃತ್ಯಗಳು,ಮಾದಕವಸ್ತು ,ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಬಿಎಸ್‍ಎಫ್ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.
ಶಾಸ್ತ್ರಿ ಅವರು ಜಮ್ಮುವಿನಲ್ಲಿರುವ ರಾಜಭವನದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದರು.
ಇದೇ ವೇಳೆ ಶೈಕ್ಷಣಿಕ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಪಾಲೂರಿನ ಬಿಎಸ್‍ಎಫ್ ಹಿರಿಯ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಎಡಿಜಿ ಸನ್ಮಾನಿಸಿದರು.
ಗಡಿ ಪ್ರದೇಶ, ಗಡಿಭಾಗದ ಕ್ಯಾಂಪಸ್‍ಗಳು ಮತ್ತು ಸೇನಾ ಕಚೇರಿಗಳಿಗೆ ಭೇಟಿ ನೀಡಿ ಯೋಧರನ್ನು ಹುರಿದುಂಬಿಸಿದ್ದಾರೆ.

