ಬೆಂಗಳೂರು: ಮಂಗಳವಾರ ಅಂದರೆ ನ.15 ರಿಂದಲೇ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳವಾಗಲಿದ್ದು ಸಾರ್ವಜನಿಕರಿಗೆ ಬರೆ ಬೀಳಲಿದೆ.
ಈ ಬಗ್ಗೆ ಕೆಎಂಎಫ್ ಅಧಿಕೃತ ಮಾಹಿತಿ ಹೊರಡಿಸಿದ್ದು,ರೈತರಿಗೆ ಬಂಪರ್ ಆಫರ್ ನೀಡಿದೆ.
ರೈತರು ಹಲವು ದಿನಗಳಿಂದ ಹಾಲು ಉತ್ಪಾದಕರ ಬೇಡಿಕೆ ಈಡೇರಿಸಬೇಕೆಂದು ಕೆಎಂಎಫ್ ಗೆ ಒತ್ತಡ ಹೇರಿದ್ದರು.
ಹಾಗಾಗಿ ರೈತರ ಬೇಡಿಕೆ ಈಡೇರಿಸಲು ಸರ್ವಜನಿಕರಿಗೆ ಕೆಎಂಎಫ್ ಹೊರೆ ಹೇರಿದೆ.
ಮಂಗಳವಾರದಿಂದಲೇ ಹಾಲಿನ ದರ ಜತೆಗೆ ಮೊಸರಿನ ದರ ಕೂಡ ಏರಿಕೆ ಮಾಡಿ ಗ್ರಾಹಕರಿಗೆ ಬರೆ ಎಳೆದಿದೆ.
ಇಷ್ಟು ದಿನ 37 ರೂಪಾಯಿಗೆ ಒಂದು ಲೀಟರ್ ಹಾಲು ಇತ್ತು.ಮೊಸರು ಪ್ರತಿ ಕೆ.ಜಿಗೆ 45 ರೂಪಾಯಿ ಇತ್ತು.
ಇನ್ನು ಮುಂದೆ ಒಂದು ಲೀಟರ್ ಹಾಲಿನ ಬೆಲೆ 40 ರೂ ಆದರೆ,ಮೊಸರ ಬೆಲೆ 48 ರೂಪಾಯಿ ಆಗಲಿದೆ.
ಟೋನ್ಡ್ ಹಾಲು ೩೭ ರಿಂದ ೪೦
ಹೊಮೋಜಿನೈಸ್ಡ್ ಹಾಲು ೩೮ ರಿಂದ ೪೧
ಹೊಮೊಜಿನೈಸ್ಡ್ ಹಸುವಿನ ಹಾಲು ೪೨ ರಿಂದ ೪೫
ಸ್ಪೆಷಲ್ ಹಾಲು ೪೩ ರಿಂದ ೪೬
ಶುಭಂ ಹಾಲು ೪೩ ರಿಂದ ೪೬
ಹೊಮೊಜಿನೈಸ್ಡ್ ಸ್ಟ್ಯಾಂಡರ್ ಡೈಸ್ಡರ್ ಹಾಲು ೪೪ ರಿಂದ ೪೭
ಸಮೃದ್ಧಿ ಹಾಲು ೪೮ ರಿಂದ ೫೧
ಸಂತೃಪ್ತಿ ಹಾಲು ೫೦ ರಿಂದ ೫೩
ಡಬಲ್ ಟೋನ್ಡ್ ಹಾಲು ೩೬ ರಿಂದ ೩೯
ಮೊಸರು ಪ್ರತಿ ಕೆಜಿಗೆ ೪೫ ರಿಂದ ೪೮ ರೂ.
ಹಾಲಿನ ದರ ಏರಿಕೆ ಪ್ರಸ್ತಾವನೆಯನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲಿಸಿದ್ದರು.
ಕೆಎಂಎಫ್ ಅಧಿಕೃತವಾಗಿ ದರ ಪರಿಕ್ಷರಣೆ ಮಾಡಿ ಪ್ರಕಟಣೆ ಹೊರಡಿಸಿದ್ದು ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬರಲಿದೆ.
ಹೆಚ್ಚಳ ಮಾಡಿರುವ ದರವನ್ನು ಅತಿವೃಷ್ಟಿ ಮತ್ತು ಹಸುಗಳಿಗೆ ಚರ್ಮಗಂಟು ರೋಗದ ಸಮಸ್ಯೆಯಿಂದ ಸಮಸ್ಯೆಗೊಳಗಾಗಿರುವ ರೈತರಿಗೆ ಸಹಾಯಹಸ್ತ ನೀಡಲು ತೀರ್ಮಾನಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಇಷ್ಟೆಲ್ಲಾ ಆಗಿದ್ದರೂ ಸಿಎಂ ಬಸವರಾಜ ಬೊಮ್ಮಾಯಿಯವರು ನಂದಿನಿ ಹಾಲಿನ ದರ ಏರಿಕೆ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದ್ದಾರೆ.
ಇತ್ತ ಕೆಎಂಎಫ್ ದರ ಏರಿಕೆ ಬಗ್ಗೆ ಪ್ರಕಟಣೆಯನ್ನೇನೋ ಹೊರಡಿಸಿದೆ.
ಹಾಗಾಗಿ ಮಂಗಳವಾರ ದಿಂದಲೇ ಹಾಲಿನ ದರ ಏರಿಕೆಯಾಗುವುದೋ ಇಲ್ಲವೋ ಕಾದು ನೋಡಬೇಕಿದೆ.

