ಬೆಂಗಳೂರು: ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚಿದರೆ ವಿರೋಧ ಪಕ್ಷದವರಿಗೆ ಏನು ಸಮಸ್ಯೆ ಆಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಪಂಡಿತ್ ಜವಹಾರ್ ಲಾಲ್ ನೆಹರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪ್ರತಿಪಕ್ಷಗಳು ಪ್ರತಿಯೊಂದರಲ್ಲೂ ವಿರೋಧ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಸರಿ ಬಣ್ಣ ನಮ್ಮ ಭಾರತದ ಧ್ವಜದಲ್ಲೇ ಇದೆ. ಕೇಸರಿ ಬಣ್ಣ ಕಂಡರೆ ಯಾಕೆ ಅಷ್ಟು ಅಲಕ್ಷ್ಯ ಎಂದು ಪ್ರಶ್ನಿಸಿದರು.
ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಾಲೆ ಮಾಡುತ್ತಿದ್ದೇವೆ. ಅವರು ತೊಡವಂತದ್ದೆಲ್ಲ ಕೇಸರಿ ಬಣ್ಣದ ಉಡುಪು.
ವಿವೇಕ ಅಂದರೆ ಜ್ಞಾನ. ಇದನ್ನು ತಿಳಿಯದೆ ವಿನಾಕಾರಣ ರಾಜಕಾರಣ ಮಾಡುವುದು ಸರಿಯಲ್ಲ ಎಂದ ಹೇಳಿದರು.
ಮಕ್ಕಳನ್ನ ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡುತ್ತಿದ್ದ ಜವಹರಲಾಲ್ ನೆಹರು ಅವರ ಜನ್ಮ ದಿನದಂದು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ನೆಹರು ಗಾಂಧೀಜಿ ಜೊತೆ ಸ್ವಾತಂತ್ರ್ಯ ಹೋರಾಟ ಮಾಡಿದವರು. ಭಾರತದ ಮೊದಲ ಪ್ರಧಾನಿಯಾಗಿದ್ದವರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುನ್ನೆಡೆಸಿದವರು ಎಂದು ಸಿಎಂ ಸ್ಮರಿಸಿದರು.

