ರಾತೋ ರಾತ್ರಿ ಗುಂಬಜ್ ಮಾದರಿ ಬಸ್ ನಿಲ್ದಾಣದ ಬಣ್ಣ ಬದಲು

ಮೈಸೂರು: ಮೈಸೂರಿನ ವಿವಾದಿತ ಗುಂಬಜ್ ಮಾದರಿ ಬಸ್ ನಿಲ್ದಾಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು ಇದು ಇನ್ನೆಲ್ಲಿಗೆ ಹೋಗಿ ತಲುಪಲಿದೆಯೊ.

ರಾತ್ರೋರಾತ್ರಿ ಗುಂಬಜ್ ಬಣ್ಣವನ್ನೆ ಬದಲು ಮಾಡಲಾಗಿದೆ.

ಗೋಲ್ಡ್ ಕಲರ್ ಇದ್ದ ಗುಂಬಜ್ ಗೆ ಈಗ ಕೆಂಪು ಬಣ್ಣ ಹಚ್ಚಲಾಗಿದೆ.

ಗುಂಬಜ್ ಮಾದರಿಯ ಬಸ್ ನಿಲ್ದಾಣದ ವಿವಾದ ತಾರಕಕ್ಕೇರುತ್ತಿದ್ದಂತೆ ಹಲವು ಬದಲಾವಣೆಯಾಗುತ್ತಲೇ ಇದೆ.

ಮೊದಲು ಗುಂಬಜ್ ಗೆ ಚಿನ್ನದ ಬಣ್ಣ  ಹಾಕಲಾಗಿತ್ತು. ಆದರೆ ರಾತ್ರೋರಾತ್ರಿ ಗೋಲ್ಡ್ ಕಲರ್ ಮಾಸುವಂತೆ ಮಾಡಿ ಪೂರ್ಣ ಪ್ರಮಾಣದಲ್ಲಿ ಕೆಂಪು ಬಣ್ಣ ಬಳಿಯಲಾಗಿದೆ.

ಸಂಸದ ಪ್ರತಾಪ್ ಸಿಂಹ ಈ ಬಸ್ ನಿಲ್ದಾಣ ನೆಲಸಮಗೊಳಿಸುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆ ರಾಮದಾಸ್ ಬಸ್ ನಿಲ್ದಾಣದಲ್ಲಿ ಹಲವು ಬದಲಾವಣೆ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ.