ಮೈಸೂರು: ಗುಂಬಜ್ ಮಾದರಿ ಬಸ್ ನಿಲ್ದಾಣಕ್ಕೆ ಪ್ರಧಾನಿ,ಮುಖ್ಯ ಮಂತ್ರಿ,ಶಿವರಾತ್ರಿ ಜಗದ್ಗುರುಗಳ ಫೋಟೊ ಅಳವಡಿಸುವ ಮೂಲಕ ಶಾಸಕ ಎಸ್.ಎ.ರಾಮದಾಸ್ ಸಂಸದ ಪ್ರತಾಪ್ಸಿಂಹಗೆ ಟಾಂಗ್ ನೀಡಿದ್ದರೆ.
ಈ ಮೂಲಕ ಪ್ರತಾಪ್ ಸಿಂಹ ಏಟಿಗೆ ರಾಮದಾಸ್ ಎದಿರೇಟು ಕೊಟ್ಟಿದ್ದಾರೆ.
ಗುಂಬಜ್ ಮಾದರಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂದು ಪ್ರತಾಪ್ ಸಿಂಹ ಬೊಬ್ಬೆ ಹೊಡೆದು ವಿವಾದ ಹುಟ್ಟು ಹಾಕಿದ್ದಲ್ಲದೆ ಕೂಡಲೆ ಇದನ್ನು ತೆರವು ಮಾಡಬೇಕೆಂದು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಯಾಗಿ ಮೈಸೂರಿನ ನಂಜನಗೂಡು–ಊಟಿ ರಸ್ತೆಯ ಬಸ್ ನಿಲ್ದಾಣಕ್ಕೆ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುತ್ತೂರು ಮಠದ ಆದಿ ಜಗದ್ಗುರು ಹಾಗೂ ಶಿವರಾತ್ರಿ ರಾಜೇಂದ್ರ ಶ್ರೀ ಫೋ಼ಟೋಗಳನ್ನು ಅಳವಡಿಸಿ ರಾಮದಾಸ್ ಟಾಂಗ್ ಕೊಟ್ಟಿದ್ದಾರೆ.
ಹೀಗೆ ಬಸ್ ನಿಲ್ದಾಣದ ವಿವಾದಿತ ಗುಂಬಜ್ ಮುಟ್ಟಲು ಪ್ರತಾಪ್ ಸಿಂಹಗೆ ಆಗದ ಪರಿಸ್ಥಿತಿಯನ್ನು ರಾಮದಾಸ್ ಮಾಡಿದ್ದಾರೆ.
ಪ್ರಧಾನಿ,ಸಿಎಂ ಹಾಗೂ ಸುತ್ತೂರು ಶ್ರೀ ಫೋಟೋ ಹಾಕಿರುವ ಕಾರಣ ಅವುಗಳನ್ನು ಮುಟ್ಟಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ.
ಮೈಸೂರಿನ ನಂಜನಗೂಡು ಊಟಿ ರಸ್ತೆಯ ಜೆಎಸ್ಎಸ್ ಕಾಲೇಜು ಮುಂಭಾಗ ಈ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಈ ಗುಂಬಜ್ ಗಳನ್ನು ಜೆಸಿಬಿ ಮೂಲಕ ಒಡೆದು ಹಾಕುವುದಾಗಿ ಪ್ರತಾಪ್ ಸಿಂಹ ಡೆಡ್ ಲೈನ್ ಕೊಟ್ಟಿದ್ದರು.
ಈಗ ಪ್ರತಾಪ್ ಸಿಂಹ ಏನು ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮೈಸೂರಿನ ಪಾರಂಪರಿಕ ಮಹತ್ವ ಸಾರಲು ಮೈಸೂರು ಅರಮನೆಯ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಆದರೆ ಮಸೀದಿ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ,ಇದನ್ನು ನಿರ್ಮಿಸಲು ಮುಸ್ಲಿಂ ಗುತ್ತಿಗೆದಾರನಿಗೆ ನೀಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ರಾಮದಾಸ್ ಆರೋಪಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಿರುವ ಹುನ್ನಾರದ ಬಗ್ಗೆ ಪೊಲಿಸ್ ಕಮಿಷನರ್ ಗೆ ದೂರು ಸಲ್ಲಿಸಲಾಗಿದೆ.
ಪ್ರತಾಪ್ ಸಿಂಹ ಹೇಳಿರುವಂತೆ ರಾತ್ರೋರಾತ್ರಿ ಕಳಸ ನಿರ್ಮಾಣ ಮಾಡಿಲ್ಲ. ಯಾವುದೇ ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
10 ಲಕ್ಷ ವೆಚ್ಚದ ಬಸ್ ನಿಲ್ದಾಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಇದನ್ನು ಮಹದೇವ್ ಎಂಬ ಗುತ್ತಿಗೆದಾರನಿಗೆ ನೀಡಲಾಗಿದೆ. ಬಸ್ ನಿಲ್ದಾಣದ ವಿನ್ಯಾಸಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಲಿ.
ಸಮಿತಿ ವರದಿಯಲ್ಲಿ ತಪ್ಪಿದ್ದರೆ ಬದಲಾವಣೆ ಮಾಡಲು ನಮ್ಮ ಅಭ್ಯಂತರ ಇಲ್ಲ ಎಂದು ಕೂಡಾ ರಾಮದಾಸ್ ತಿಳಿಸಿದ್ದಾರೆ.
ಬಸ್ ನಿಲ್ದಾಣದ ಗುಂಬಜ್ ಗಲಾಟೆ ಎಲ್ಲಿಗೆ ಬಂದು ನಿಲ್ಲುವುದೋ ಕಾದುನೋಡಬೇಕಿದೆ

