ನೂತನ ಪೋಲಿಸ್ ಆಯುಕ್ತ ಬಿ.ರಮೇಶ್ ಅಧಿಕಾರ ಸ್ವೀಕಾರ

ಮೈಸೂರು: ಮೈಸೂರು ನಗರ ಪೋಲಿಸ್ ಆಯುಕ್ತರಾಗಿ ಬಿ‌.ರಮೇಶ್ ಅವರು ಮಂಗಳವಾರ‌‌ ಅಧಿಕಾರ ಸ್ವೀಕರಿಸಿದರು.

ಕಳೆದ ಎರಡೂವರೆ ವರ್ಷಗಳಿಂದ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ ಡಾ.ಚಂದ್ರಗುಪ್ತ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಡಾ.ಚಂದ್ರಗುಪ್ತ ಅವರನ್ನು ಮಂಗಳೂರಿನ ಪಶ್ಚಿಮ ವಲಯದ ಐಜಿಪಿಯಾಗಿ ನಿಯೋಜನೆ ಮಾಡಲಾಗಿದೆ.

ಮೈಸೂರು ನಗರ ನೂತನ ಪೋಲಿಸ್ ಆಯುಕ್ತರಾಗಿ ಬಿ‌.ರಮೇಶ್ ಅವರನ್ನು ನಿಯೋಜನೆ ಮಾಡಲಾಗಿದ್ದು ಅವರು ಮಂಗಳವಾರವೇ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು ಮೈಸೂರಿಗೆ ಬಂದಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಏನೇ‌ ಸಮಸ್ಯೆ ಎದುರಾದರೂ ಠಾಣೆಗಳಿಗೆ ಹೋಗಿ‌ ದೂರು ನೀಡಬೇಕೆಂದು ಸಲಹೆ ನೀಡಿದರು.

ಯಾವುದೇ ಠಾಣೆಯಲ್ಲಿ ಜನರಿಗೆ ಉತ್ತಮ ಸ್ಪಂದನೆ ಸಿಗದಿದ್ದರೆ ನೇರವಾಗಿ ನನ್ನನ್ನೇ ಭೇಟಿ ಮಾಡಬಹುದು.ಜನರಿಗೆ ನ್ಯಾಯ ಸಿಗುವಂತೆ ಮಾಡುತ್ತೇನೆ, ನಾನು‌ ಸದಾಕಾಲ ನಿಮಗೆ ಸಿಗುತ್ತೇನೆ ಎಂದು ರಮೇಶ್ ತಿಳಿಸಿದರು.