ಮೈಸೂರು: ಕಾರ್ತಿಕ ದೀಪೋತ್ಸವವನ್ನು ಸುಖ, ಸಮೃದ್ಧಿ ಮತ್ತು ಐಶ್ವರ್ಯದ ಸಂಕೇತವಾಗಿ ಆಚರಿಸಲಾಗುತ್ತದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ. ಪ್ರಕಾಶ್ ಹೇಳಿದರು.
ಯಾದಗಿರಿ ಕೆ ಆರ್ ಎಸ್ ರಸ್ತೆಯಲ್ಲಿರುವ ಶ್ರೀ ಉತ್ತರಾದಿ ಮಠದ ಪ್ರಾಣದೇವರ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಏರ್ಪಡಿಸಿದ್ದ ಸಾಮೂಹಿಕ ರುದ್ರಾಭಿಷೇಕ, ಬಿಲ್ವಾರ್ಚನೆ, ದೀಪಾರಾಧನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಎಲ್ಲಾ ಧಾರ್ಮಿಕ ಕಾರ್ಯಗಳು ಪಂಡಿತ್ ಅನಿರುದ್ಧ್ ಆಚಾರ್ ಪಾಂಡುರಂಗಿರವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸುಮಾರು 250 ಕ್ಕೂ ಹೆಚ್ಚು ಭಕ್ತಾದಿಗಳು ಸಾಮೂಹಿಕವಾಗಿ ರುದ್ರನಮಕ,ಚಮಕ ಪಾರಾಯಣದೊಂದಿಗೆ ವಿದ್ವಾನ್ ವಿಜಯವಿಠಲ ಆಚಾರ್ಯ ಕೂಡ್ಲೂರು ನೇತೃತ್ವದಲ್ಲಿ ನೆರವೇರಿತು
ಈ ವೇಳೆ ಮಾತನಾಡಿದ ಪಂಡಿತ್ ಅನಿರುದ್ಧ್ ಆಚಾರ್ ಪಾಂಡುರಂಗಿ ಧರ್ಮದಿಂದ ನೆಮ್ಮದಿ ಸಾಧ್ಯ
ಪ್ರತಿಯೊಬ್ಬರು ಧರ್ಮದ ಕಡೆ ಗಮನ ಹರಿಸಿದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗುತ್ತಿವೆ. ಸಂಸ್ಕಾರ, ಸಂಸ್ಕೃತಿ ಹಾಗೂ ಸಂಬಂಧಗಳು ಕಡಿಮೆಯಾಗುತ್ತಿವೆ ಎಂದು ವಿಷಾದಿಸಿದರು.
ಕಾಂಗ್ರೆಸ್ ಯುವ ಮುಖಂಡ ಎನ್. ಎಂ. ನವೀನ್ ಕುಮಾರ್,ನಗರ ಪಾಲಿಕೆ ಸದಸ್ಯೆ ಪ್ರಮೀಳಾ,ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್. ಬಿ. ವಾಸುದೇವಮೂರ್ತಿ ,ಅರ್ಚಕರಾದ ಶ್ರೀ ನಾಗಭೂಷಣ, ಪ್ರಮೋದ್ ಹಾಗೂ ಭಕ್ತರು ಪಾಲ್ಗೊಂಡಿದ್ದರು.

