ಪ. ಮಲ್ಲೇಶ್ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮೈ ಸೂರು: ಬ್ರಾಹ್ಮಣರ ಮತ್ತು ಬ್ರಾಹ್ಮಣಿಕೆ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹಾಗೂ ಅಶ್ಲೀಲವಾಗಿ ಮಾತನಾಡಿದ್ದಾರೆಂದು ಆರೋಪಿಸಿ‌ ಕಾಂಗ್ರೆಸ್ ಸದಸ್ಯ ಪ. ಮಲ್ಲೇಶ್ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟ ದೂರು ದಾಖಲಿಸಿದೆ.

ವೇದ ಹಾಗೂ ಉಪನಿಷತ್ತುಗಳ ಬಗ್ಗೆ  ಕೆಟ್ಟ ಅಭಿರುಚಿಯಿಂದ ಲಘುವಾಗಿ ಮಾತನಾಡಿ, ಮಠಾಧೀಶರನ್ನು ಕೂಡ ಅವಹೇಳನ ಮಾಡಿರುವ ಪ. ಮಲ್ಲೇಶ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟದ‌ಸದಸ್ಯರು ಒತ್ತಾಯಿಸಿದ್ದಾರೆ.

ದೂರಿನಲ್ಲಿ ಜಾತಿನಿಂದನೆ ಸೇರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ವಿಚಾರವನ್ನು ಸೇರಿಸಿ 153A, 295, 295A ಕಲಂನಡಿ ದೂರು ದಾಖಲಿಸುವಂತೆ ಕೋರಿದ್ದಾರೆ.

ಧಾರ್ಮಿಕ ಮುಖಂಡ ಡಾ. ಭಾನುಪ್ರಕಾಶ್ ಶರ್ಮ,ಬಿಜೆಪಿ ನಗರಾಧ್ಯಕ್ಷ ಟಿ. ಎಸ್. ಶ್ರೀವತ್ಸ, ವಿಪ್ರ ಮುಖಂಡ ಎಚ್. ವಿ. ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ. ಪ್ರಕಾಶ್, ಆದರ್ಶ ಸಂಘದ ಅಧ್ಯಕ್ಷ ಜಿ. ಆರ್. ನಾಗರಾಜ್, ವಿಪ್ರ ಪ್ರೊಫೆಷನಲ್ ಫೋರಂ ಅಧ್ಯಕ್ಷ  ಎಸ್.ಭಾಷ್ಯಂ, ಸುಧೀಂದ್ರ, ಕೆ. ಆರ್. ಸತ್ಯನಾರಾಯಣ್, ರಾಕೇಶ್ ಭಟ್, ಎಚ್‍. ಜಿ. ಗಿರಿಧರ್ ಜಯಸಿಂಹ, ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಲತಾ ಮೋಹನ್, ಜೆಡಿಎಸ್ ಯುವ ಮುಖಂಡರಾದ ವಿಜಯಕುಮಾರ್, ನಾಗೇಂದ್ರ ಬಾಬು, ಯೋಗ ನರಸಿಂಹ ಮುರಳಿ, ಹೊಯ್ಸಳ ಕರ್ನಾಟಕದ ರಂಗನಾಥ್, ವಕೀಲರಾದ ಶೇಷಗಿರಿ, ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾದ ಡಾಕ್ಟರ್ ಲಕ್ಷ್ಮೀದೇವಿ, ನಗರಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ಕಡಕೊಳ ಜಗದೀಶ್, ವಿವೇಕಾನಂದ ಬ್ರಾಹ್ಮಣ ಸಂಘದ ಅಧ್ಯಕ್ಷ ಜಯರಾಮ್, ಓಂ ಶ್ರೀನಿವಾಸ ಮತ್ತಿತರ ವಿಪ್ರ ಮುಖಂಡರು ಈ ವೇಳೆ ಹಾಜರಿದ್ದರು.