ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕ ಕೈಗಳ ಕೊರತೆಯಿಂದ ಸಮಸ್ಯೆ – ಎಸ್.ಎ. ರಾಮದಾಸ್

ಮೈಸೂರು: ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕ ಕೈಗಳ ಕೊರತೆಯಿಂದ ಕೆಲವು ಸಮಸ್ಯೆಗಳು ಉದ್ಭವವಾಗುತ್ತದೆ ಎಂದು ಶಾಸಕ ಎಸ್.ಎ‌.ರಾಮದಾಸ್ ಹೇಳಿದರು.

ಗಾನ ಭಾರತಿ ಸಂಗೀತ ಸಭಾದಲ್ಲಿ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ನೀವು ಎತ್ತರಕ್ಕೆ ಬೆಳೆಯಬಹುದು. ಆ ಮೂಲಕ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡಬೇಕು.

ಸಹಕಾರಿ ಬಂಧುಗಳು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು‌ ಎಂದು ಸಲಹೆ ನೀಡಿದರು.

ಸಹಕಾರ ಕ್ಷೇತ್ರ ಜನಸಾಮಾನ್ಯರ ಕಾಮಧೇನುವಾಗಿದೆ. ಕೋವಿಡ್ ಸಂದರ್ಭದಲ್ಲಿ ದೇಶ ಆರ್ಥಿಕ ಸಮತೋಲನ ಹೊಂದಲು ಸಹಕಾರ ಕ್ಷೇತ್ರ ಕಾರಣವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ರಾಮದಾಸ್ ಹೇಳಿದರು.

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಸಂಘದ ಸದಸ್ಯರಾದ

ವಿಕ್ರಮ್ ಐಯ್ಯಂಗಾರ್, ಆನಂದ್, ವೇ.ಬ್ರ.ಶಶಿ ಶೇಖರ ಧೀಕ್ಷಿತ್, ಆರ್.ಅನಂತರಾಮನ್, ಹೆಚ್.ವಿ.ಎಲ್.ಎನ್.ಐಯ್ಯಂಗಾರ್, ಸುದರ್ಶನ್. ಎಸ್ ಇವರುಗಳನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿ ಮತ್ತು ಸಂಗೀತ ,ನೃತ್ಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮೂಡ ಮಾಜಿ ಅಧ್ಯಕ್ಷ ಎಚ್. ವಿ. ರಾಜೀವ್, ಬಿಜೆಪಿ ನಗರ ಅಧ್ಯಕ್ಷ ಟಿ. ಎಸ್. ಶ್ರೀವತ್ಸ, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಿ.ವಿ.ಪಾರ್ಥಸಾರಥಿ, ಉಪಾಧ್ಯಕ್ಷ ಹೆಚ್.ಎಸ್.ಪ್ರಶಾಂತ್ ತಾತಾಚಾರ್, ಖಜಾಂಚಿ ಎಂ.ಡಿ.ಗೋಪಿನಾಥ್,  ಕೆ.ನಾಗರಾಜ್, ಎಂ.ಆರ್.ಪ್ರೀತಮ್, ಎನ್.ಫಣಿರಾಜ್, ಎಸ್.ಎನ್.ನಾಗಶಂಕರ, ಎಂ.ಆರ್.ಬಾಲಕೃಷ್ಣ, ಕೆ.ಎನ್.ಅರುಣ್, ನಾಗೇಂದ್ರ ಯಾದವ್, ಎನ್.ಎಸ್.ರಂಗನಾಥ್, ರೇಖಾ, ಎಂ.ಎನ್,ಸೌಮ್ಯ, ಎಸ್. ರಾಜಮ್ಮ, ಜಿ.ಎನ್.ಸತೀಷ, ವೀಣಾನಾಗಸುಂದರ್  ಮತ್ತಿತರರು ಹಾಜರಿದ್ದರು.