ಮೈಸೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ರುವಾರಿ ಶಾರೀಕ್ ತಾನು ಹಿಂದು ಎಂದು ನಂಬಿಕೆ ಬರುವಂತೆ ಮಾಡಲು ಕತರ್ನಾಕ್ ನಾಟಕವಾಡಿದ್ದಾನೆ.
ಆತ ನಗರದ ಕೆ.ಆರ್.ಮೊಹಲ್ಲಾದಲ್ಲಿರುವ ಎಸ್ ಎಮ್ ಎಮ್ ಮೊಬೈಲ್ ಅಂಗಡಿಯಲ್ಲಿ ತರಬೇತಿ ಪಡೆಯುವಾಗಲೂ ಸಾಕಷ್ಟು ಗೌಪ್ಯವಾಗಿ ನಡೆದುಕೊಂಡಿದ್ದಾನೆ.
ಮೊಬೈಲ್ ಅಂಗಡಿ ಮಾಲೀಕರ ಪ್ರಕಾರ ಆ ಶಂಕಿತ ಉಗ್ರನ ಚಹರೆ ಮುಗ್ಧವಾಗಿತ್ತು.ತನ್ನ ಮೊಬೈಲ್ ನಲ್ಲಿ ಇಶಾ ಫೌಂಡೇಶನ್ ನ ಈಶನ ಚಿತ್ರವನ್ನು ಹಾಕಿಕೊಂಡಿದ್ದ.
ನಮ್ಮ ಮೊಬೈಲ್ ಶಾಪ್ ಪಕ್ಕದಲ್ಲೇ ಮಸೀದಿ ಇದೆ, ಅಲ್ಲಿ ಆಜಾನ್ ಕೂಗುವಾಗಲೂ ಆತ ಸ್ಥಿತಪ್ರಜ್ಞನಂತೆ ಇರುತ್ತಿದ್ದ ಎಂದು ಹೇಳಿದ್ದಾರೆ.
ಹೀಗೆ ಶಾರೀಕ್ ತಾನು ಉಗ್ರನೆಂದಾಗಲೀ,ಮುಸಲ್ಮಾನನೆಂದಾಗಲಿ ಯಾರಿಗೂ ಎಳ್ಳಷ್ಟೂ ಸಂಶಯ ಬಾರದಂತೆ ನಡೆದುಕೊಂಡಿದ್ದಾನೆ.

