ಮೈಸೂರು: ಹುಲಿಯೊಂದಿಗೆ ಕಾದಾಡಿ ಮರಿ ಹುಲಿ ಮೃತಪಟ್ಟ ಘಟನೆ ನಾಗರಹಿಳೆಯಲ್ಲಿ ನಡೆದಿದೆ.
ಅಂತರಸಂತೆ ವನ್ಯಜೀವಿ ವಲಯದ ತಾರಕ ಶಾಖೆಯ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿ ಮರಿ ಮೃತದೇಹ ಪತ್ತೆಯಾಗಿದೆ.
ಇತ್ತೀಚೆಗೆ ಕ್ಯಾಮರಾಗೆ ಸೆರೆ ಸಿಕ್ಕಿದ ನಾಲ್ಕು ಹುಲಿಮರಿಗಳ ಚಲನವಲನವನ್ನ ಗಮನಿಸಲು ಕೊಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಹುಲಿಮರಿಯ ಮೃತದೇಹ ಪತ್ತೆಯಾಗಿದೆ.
ಮತ್ತೊಂದು ಹುಲಿ ಜೊತೆ ಕಾದಾಡಿ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹುಲಿಮರಿಯ ಕತ್ತು ಹಾಗೂ ಭುಜದ ಮೇಲೆ ಗಾಯಗಳು ಕಂಡು ಬಂದಿದೆ.
ಹುಲಿಮರಿಯ ಕಳೇಬರವನ್ನ ಹಿರಿಯ ಅರಣ್ಯಾಧಿಕಾರಿಗಳು,ಪಶುವೈದ್ಯರು ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

