ಮೈಸೂರು: ಮೈಸೂರಿನ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಹಬ್ಬದ ಸಡಗರ.
ಸಹಸ್ರಗಳ ಸಂಪೂರ್ಣ ಭಗವದ್ಗೀತಾ ಪಾರಾಯಣ ಮಹಾಯಜ್ಞಕ್ಕೆ ಇಂದು ಸಹಸ್ರಾರು ಭಕ್ತರು ಸಾಕ್ಷಿಯಾದರು.
ಇಂದು ಗೀತಾ ಜಯಂತಿ, ಹಾಗಾಗಿ ಸಹಸ್ರಗಳ ಪಾರಾಯಣ ಯಜ್ಞ ಆಶ್ರಮದ ನಾದಮಂಟಪದಲ್ಲಿ ಜರುಗಿತು.
ಈ ಬೃಹತ್ ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಚಾಲನೆ ನೀಡಿ ಪಾರಾಯಣದಲ್ಲಿ ಪಾಲ್ಗೊಂಡಿದ್ದುದು ವಿಶೇಷ.
ಗೀತೆಯನ್ನು ಕಂಠಪಾಠ ಮಾಡಿರುವ 1600 ಮಂದಿ ಹಾಗೂ ಭಗವದ್ಗೀತೆ ಗ್ರಂಥ ನೋಡಿ ಸುಲಲಿತವಾಗಿ ಪಾರಾಯಣ ಮಾಡುವ 2000 ಮಂದಿ ಸೇರಿ ಒಟ್ಟು 3600 ಮಂದಿ ಏಕಕಾಲದಲ್ಲಿ ಪಾರಾಯಣ ಮಾಡಿದುದು ನಿಜಕ್ಕೂ ಅದ್ಭುತವಾಗಿತ್ತು. ಇದು ಚರಿತ್ರೆಯ ಪುಟದಲ್ಲಿ ಸೇರಬೇಕಾಗಿದೆ.
ದತ್ತಪೀಠವು ಉಚಿತ ಆನ್ ಲೈನ್ ಗೀತಾ ತರಗತಿಗಳನ್ನು ನಡೆಸುತ್ತಿದೆ.
ಪೀಠದ ವತಿಯಿಂದ ನಡೆಸುತ್ತಿರುವ ಭಗವದ್ಗೀತಾ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆಯಾದವರಿಗೆ ಇಂದು ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತಮ್ಮ ಅಮೃತ ಹಸ್ತದಿಂದ ಚಿನ್ನದ ಪದಕಗಳನ್ನು ನೀಡಿ ಗೌರವಿಸಿದರು.
ನಂತರ ನಾದಮಂಟಪದಲ್ಲಿ ಗೀತಾ ಪಾರಾಯಣ ನಡೆಯುವಾಗ ಶ್ರೀಗಳು ಪ್ರತಿ ಸಾಲಿಗೂ ಹೋಗಿ ಒಬ್ಬೊಬ್ಬರ ಮೇಲೂ ಪುಷ್ಪವೃಷ್ಟಿ ಮಾಡಿ ಆಶೀರ್ವದಿಸಿದುದು ವಿಶೇಷವಾಗಿತ್ತು.
4,5,6 ವರ್ಷದಿಂದ ಹಿಡಿದು 80 ವರ್ಷದ ವರು ಕೂಡಾ ಗೀತಾ ಕಂಠಪಾಠ ಮಾಡಿರುವುದು ಹಾಗೂ ನಿರರ್ಗಳವಾಗಿ ಪಠಿಸಿದುದು ಪೂಜ್ಯರ ಅನುಗ್ರಹ ಮತ್ತು ದೈವ ಅನುಗ್ರಹ ಎಂದೇ ಹೇಳಬಹುದು.
ಗೀತೆಯನ್ನು ಪೂರ್ಣವಾಗಿ ಕಂಠಸ್ಥ ಮಾಡಿರುವ ಆರು ವರ್ಷದ ವಿಷ್ಣುದತ್ತ ಹಾಗೂ 75 ವರ್ಷದ ಎಸ್.ವಿ.ಪಿ.ಸತ್ಯನಾರಾಯಣ ಮೂರ್ತಿ ಅವರನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಅವರು ವಶೇಷವಾಗಿ ಗೌರವಿಸಿದರು.
ಇದಕ್ಕೂ ಮೊದಲು ಶ್ರೀಗಳ ಈ ಪುಣ್ಯ ಕಾರ್ಯವನ್ನು ಶ್ಲಾಘಿಸಿ ಆಯುಶ್ ನೀಡಿರುವ ಚಿನ್ನದ ಪದಕಗಳು ಮತ್ತು ಸರ್ಟಿಫಿಕೇಟ್ ಅನ್ನು ಶ್ರೀಗಳು ಪ್ರದರ್ಶಿಸಿದರು.

