ಭಗವದ್ಗೀತೆ ಇಂದಿಗೂ, ಎಂದೆಂದಿಗೂ ಮನುಷ್ಯರಿಗೆ ಅತ್ಯಗತ್ಯ -ಗಣಪತಿ ಸ್ವಾಮೀಜಿ

ಮೈಸೂರು: ಭಾರತ ದೇಶದಲ್ಲಿ ಹುಟ್ಟಿದ‌ ಮೇಲೆ ಬೇರೆ,ಬೇರೆ ಧರ್ಮ ಎಂಬುದಿಲ್ಲ.ಆ ಭಗವಂತನಿಗೆ ಎಲ್ಲಾ ‌ಜನರೂ,ಎಲ್ಲಾ ಧರ್ಮವೂ ಒಂದೇ ಎಂದು ಶ್ರೀ ಗಣಪತಿ ಸಚ್ಚಿದಾನಂದ‌ ಸ್ವಾಮೀಜಿ ನುಡಿದರು.

ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿದವರಿಗೆ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಚಿನ್ನದ ಪದಕ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಿದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.

ಭಗವದ್ಗೀತೆಯು ಇಂದಿಗೂ, ಎಂದೆಂದಿಗೂ ಮನುಷ್ಯರಿಗೆ ಅತ್ಯಗತ್ಯ ಎಂದು ಸ್ವಾಮೀಜಿ ತಿಳಿಸಿದರು.

ಭಗವದ್ಗೀತೆಯು ಮಹಾಭಾರತದ ಯುದ್ದ ಸಂದರ್ಭದಲ್ಲಿ ಅರ್ಜುನನ ನೆಪದಲ್ಲಿ ಆ ಪರಮಾತ್ಮ ನಮಗೆಲ್ಲರಿಗೂ ಹಿತೋಪದೇಶಗಳನ್ನು ಬೋಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಗೀತೆಯು ನಮಗೆಲ್ಲರಿಗೂ ಅತ್ಯಂತ ಅವಶ್ಯಕ ವಾಗಿದೆ.ಮನೆಯಲ್ಲಿನ ದರಿದ್ರ ದೂರವಾಗಲು,ವಿದ್ಯಾಭ್ಯಾಸ ಮುಂದುವರಿಯಲು,ಮಾನಸಿಕ ತೊಳಲಾಟಗಳಿಂದ‌ ಹೊರಬರಲು ಗೀತಾ‌ ಪಠಣ ಸಹಕಾರಿ ಎಂದು ಹೇಳಿದರು.

ಮೋಕ್ಷ ಪಡೆಯುವ ಕೊನೆ ಕ್ಷಣದಲ್ಲಿರುವವರಿಗೆ,ಅಷ್ಟೇ ಏಕೆ ಹುಟ್ಟಿದ ಮಗುವಿಗೂ ಗೀತೆಯ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.

ಎಲ್ಲಾ ಕಾಲಕ್ಕೂ ಗೀತೆಯ ಬೋದನೆ ಅಗತ್ಯವಿದೆ,ಹಾಗಾಗಿ ಭಗವದ್ಗೀತೆಯನ್ನು ಎಲ್ಲರೂ ಕಲಿಯಬೇಕು ಎಂದು ಸ್ವಾಮೀಜಿ ತಿಳಿಸಿಕೊಟ್ಟರು.

ಅದರಲ್ಲೂ ಈ ಕಲಿಯುಗಕ್ಕೆ ಗೀತೆ ಬೇಕೇ ಬೇಕು.ಮೊದಲು ನಿರ್ಮಲ ಮನಸ್ಸಿನಿಂದ ಮನನ ಮಾಡಬೇಕು,ಗೀತೆಯನ್ನು ಓದುವ ಸಂದರ್ಭದಲ್ಲಿ ಬೇರೆ ಕಡೆ ಗಮನ ಹರಿಸಬಾರದು ಎಂದು ಸಲಹೆ ನೀಡಿದರು.

ಮಾನವ ಜನ್ಮವೇ ಒಂದು ದೈವ ಸಂಕಲ್ಪ.ಈ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು.ನಾವು ಎಲ್ಲರಿಗೂ ಒಳಿತು ಮಾಡಬೇಕೆ ಹೊರತು ಕೇಡು ಬಯಸಬಾರದು ಎಂದು ಹಿತನುಡಿ ಹೇಳಿದರು.

ಭಗವದ್ಗೀತೆಯ 700 ಶ್ಲೋಕಗಳನ್ನು ಕಲಿತರೆ ನಿಜಕ್ಕೂ ನಿಮ್ಮ ಜೀವನವೇ ಬದಲಾಗಿ ಬಿಡುತ್ತದೆ.

ಸಂಕಲ್ಪ ಮಾಡಿ ಗೀತೆಯನ್ನು ಕಲಿಯಿರಿ,ಇದರಿಂದ ಮನಸಿನ ವಿಕಲ್ಪ ದೂರವಾಗುತ್ತದೆ ಎಂದು ಗಣಪತಿ ಶ್ರೀಗಳು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಮೆರಿಕದ ಛಲ ಶ್ರೀಕಾಂತಗಾರು ಅವರು ಮಾತನಾಡಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು‌ ಧರ್ಮ ವಿಜಯ ಯಾತ್ರೆ ಮಾಡಿದ್ದಾರೆ ಇದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು.

ಮೂರು ಸಾವಿರಕ್ಕೂ ಹೆಚ್ಚು ಮಂದಿ ಒಂದೇ ವೇದಿಕೆಯಲ್ಲಿ ಭಗವದ್ಗೀತೆ ಪಠಣ‌ಮಾಡುವುದು ನಿಜಕ್ಕೂ ಚರಿತ್ರಾರ್ಹ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು.

ಮೂರು ವರ್ಷ, ನಾಲ್ಕು ವರ್ಷದ ಮಕ್ಕಳು ಗೀತ ಪಠಣ ಮಾಡಿತ್ತಾರೆಂದರೆ ಶ್ರೀಗಳ ಸಹಕಾರ,ಅವರ ದಿವ್ಯ ದೃಷ್ಟಿಯಿಂದ ಮಾತ್ರ ಸಾಧ್ಯ. ಹಾಗಾಗಿ ನಾವು ಶ್ರೀಗಳಲ್ಲೇ ಶ್ರೀ ಕೃಷ್ಣನನ್ನು ಕಾಣಬಹುದು ಎಂದು ‌ಬಣ್ಣಿಸಿದರು.

ಸ್ವಾಮೀಜಿಯವರ ಸ್ಪೂರ್ತಿಯಿಂದ ಬಹಳಷ್ಟು ಟ್ರಸ್ಟ್ ಗಳು ಸಂಘ,ಸಂಸ್ಥೆಗಳು ಭಗವದ್ಗೀತೆ ಕಲಿಸಲು ಇಚ್ಚಿಸಿ ಆ ಕೆಲಸ ಮಾಡುತ್ತಿವೆ.

ಇಡೀ ವಿಶ್ವದಲ್ಲೇ ಗೀತಾ ಪಠಣ ನಡೆಯುತ್ತಿದೆ ಇದಕ್ಕೆ ಗಣಪತಿ ಸ್ವಾಮೀಜಿಯವರ ಪ್ರೇರಣೆ ಕಾರಣ ಎಂದು ತಿಳಿಸಿದರು.

ಅವಧೂತ ದತ್ತ ಪೀಠದ ಬಾಲ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಭಗವದ್ಗೀತೆ ಕುರಿತು ಮಾತನಾಡಿ ಎಲ್ಲರೂ ಗೀತೆಯನ್ನು ಓದಬೇಕು ಅಭಿಯಾನದ‌ ಮಾದರಿಯಲ್ಲಿ ಗೀತಾ‌ಪಠಣ ಬೆಳೆಯಬೇಕು ಎಂದು ಆಶಿಸಿದರು.