ಬೆಂಗಳೂರು: ಕೆಲ ಮಾಧ್ಯಮಗಳು ಜೆಡಿಎಸ್ ಪಕ್ಷ ಇದೆ ಎಂಬುದನ್ನೇ ಮರೆತಿವೆ ಆದರೂ ನನಗೆ ಬೇಸರ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು
ಜೆಪಿ ಭವನದಲ್ಲಿ ನಡೆದ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಜರಾತ್ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಯಾವ ತಂತ್ರ ಮಾಡುತ್ತಿವೆ ಎಂಬುದನ್ನು
ಕಳೆದ ಎರಡು ಮೂರು ದಿನಳಿಂದ ಮಾಧ್ಯಮದವರು ತೋರಿಸುತ್ತಿದ್ದಾರೆ.
ಕೆಲವು ಮಾಧ್ಯಮಗಳು ನಮ್ಮ ಪಕ್ಷ ಇದೆ ಎನ್ನೋದನ್ನೇ ಮರೆತಿವೆ,ಆಗಲಿ ಬೇಸರ ಇಲ್ಲ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಗಿಂತ ಜೆಡಿಎಸ್ ಗ್ರಾಫ್ ಮೇಲೆ ಏಳುತ್ತಿದೆ ಎಂಬುದನ್ನ ಅರಿಯಬೇಕು ಎಂದು ಹೇಳಿದರು.
ಬೆಂಗಳೂರನಲ್ಲಿ ಜನರಿಗೆ ರಕ್ಷಣೆ ಇಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ಇಂದು ಬಿಜೆಪಿ, ಕಾಂಗ್ರೆಸ್ ಆಂತರಿಕ ಸಮೀಕ್ಷೆ ನಡೆಸುತ್ತಿವೆ. ಪ್ರತಿ ಎರಡು ತಿಂಗಳಿಗೆ ಒಂದು ಸ್ಟಾಟರ್ಜಿ ಮಾಡುತ್ತಿವೆ.
ಬಿಜೆಪಿಯ ಆಂತರಿಕ ಸರ್ವೆ ಪ್ರಕಾರ ಜೆಡಿಎಸ್ 55 ಸ್ಥಾನ ಗೆಲ್ಲಲಿದೆ ಎನ್ನುತ್ತಿದ್ದಾರೆ. ಆದರೆ, ಕೇವಲ 55 ಅಲ್ಲ,123 ಸ್ಥಾನ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಚಾಮರಾಜಪೇಟೆಯಲ್ಲಿ ಮತ್ತೊಮ್ಮೆ ಜೆಡಿಎಸ್ ಗೆಲ್ಲಬೇಕು,ಯಾರೇ ಆಗಿರಲಿ
ಹಣ ಹಂಚುವುದು ದೊಡ್ಡದಲ್ಲ, ಆ ಹಣ ಹೇಗೆ ಸಂಗ್ರಹವಾಗಿದೆ ಎಂಬುದನ್ನು ಸರಿಯಾಗು ಗಮನಿಸಬೇಕು ಎಂದು ತಿಳಿಸಿದರು.
ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆ ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರ ಆಗಲಿದೆ. ಚಾಮರಾಜಪೇಟೆ ಹಿಂದೆ ಯಾವ ರೀತಿ ಇತ್ತು. ಈಗ ಹೇಗಿದೆ. ಅದಕ್ಕೆಲ್ಲಾ ಒಂದು ಇತಿಹಾಸ ಇದೆ ಎಂದು
ಹೇಳಿದರು.

