ರಾಜ್ಯಕ್ಕೂ ಕಾಲಿಟ್ಟ ರೂಪಾಂತರಿ ವೈರಸ್

ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ಕೋವಿಡ್‍ಗಿಂತ ವೇಗವಾಗಿ ಹರಡಬಲ್ಲ ಹೊಸ ರೂಪಾಂತರಿ ತಳಿ ರಾಜ್ಯಕ್ಕೂ ಕಾಲಿಟ್ಟಿದ್ದು ಆತಂಕ ಶುರುವಾಗಿದೆ.

ಚೀನಾ ಮತ್ತು ಅಮೆರಿಕ‌ ದೇಶಗಳನ್ನು  ಕಾಡುತ್ತಿರುವ ಓಮಿಕ್ರಾನ್‍ನ ಹೊಸ ರೂಪಾಂತರಿ ವೈರಸ್  XBB.1.5 ತಳಿ ಭಾರತ,ಅಷ್ಟೇ ಏಕೆ ಕರ್ನಾಟಕಕ್ಕೂ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಅಮೆರಿಕಾದಲ್ಲಿ ಶರವೇಗದಲ್ಲಿ ಹರಡುವ ಮೂಲಕ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ತಳಿ ಭಾರತಕ್ಕೂ ಕಾಲಿಟ್ಟಿರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜಸ್ಥಾನ, ಗುಜರಾತ್‍ನ ಮೂವರಲ್ಲಿ ಕಾಣಿಸಿಕೊಂಡಿದ್ದ ಈ ಹೊಸ ರೂಪಾಂತರಿ ವೈರಸ್ ನಮ್ಮ ರಾಜ್ಯದಲ್ಲೂ ಒಬ್ಬರಲ್ಲಿ ಕಾಣಿಸಿಕೊಂಡಿರುವುದರಿಂದ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.

ಸ್ರವಿಸುವ ಮೂಗು, ಜ್ವರ, ಗಂಟಲು ನೋವು, ತಲೆನೋವು, ಶೀತ, ಸೀನು ಮತ್ತು ಕೆಮ್ಮು ಹೊಸ ರೂಪಾಂತರಿಯ ಮುಖ್ಯ ಲಕ್ಷಣವಾಗಿದೆ.

ಕೊರೊನಾಗಿಂತ 120 ಪ್ರತಿಶತ ಆಪಾಯಕಾರಿಯಾಗಿರುವ ಈ ವೈರಸ್ ಮನುಷ್ಯನ ಜೀವಕೋಶಗಳೊಂದಿಗೆ ಉತ್ತಮ ರೀತಿಯಲ್ಲಿ ಸಂಪರ್ಕ ಸಾಧಿಸುವ ಶಕ್ತಿ ಹೊಂದಿದೆಯಂತೆ.

ಹಾಗಾಗಿ ಈಗಿನಿಂದಲೇ ಜನತೆ ಎಚ್ಚೆತ್ತುಕೊಳ್ಳಬೇಕಿದೆ.