ಆರೋಪ ಸಾಬೀತುಪಡಿಸಲಿ; ಎಚ್ ಡಿ ಕೆಗೆ ಆರಗ‌ ಜ್ಞಾನೇಂದ್ರ ಸವಾಲು

ಶಿವಮೊಗ್ಗ: ನಮ್ಮ ನಿವಾಸದಲ್ಲಿ ಹಣ ಎಣಿಸಿದ್ದಾರೆಂಬ ಆರೋಪ ಹಸಿಸುಳ್ಳು, ಹೆಚ್.ಡಿ ಕುಮಾರಸ್ವಾಮಿ ಆರೋಪ ಸಾಬೀತುಪಡಿಸಲಿ ಎಂದು ಗೃಹ ಸಚಿವ  ಅರಗ ಜ್ಞಾನೇಂದ್ರ ಸವಾಲು ಹಾಕಿದ್ದಾರೆ.

ನನ್ನ ಮನೆಯಲ್ಲಿ ಹಣ ಎಣಿಸಿದ್ದರು ಎಂಬುದು ಸುಳ್ಳು, ಹೆಚ್.ಡಿ ಕುಮಾರಸ್ವಾಮಿ ಹತಾಶ ಸ್ಥಿತಿಗೆ ತಲುಪಿ ಏನೇನೋ ಹೇಳುತ್ತಿದ್ದಾರೆ, ಮೊದಲು ಆರೋಪ ಸಾಬೀತು ಮಾಡಲಿ ಎಂದು ಒತ್ತಾಯಿಸಿದರು.

ಹೆಚ್.ಡಿ.ಕೆ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಯಾರದ್ದೋ ಫೋಟೊ ಇಟ್ಟುಕೊಂಡು ಆರೋಪ ಮಾಡುವುದು ಸರಿಯಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.